Advertisement

ಸರ್ವರೋಗಕ್ಕೂ ಮನೆಮದ್ದು ವೀಳ್ಯದೆಲೆ

10:27 PM Jan 20, 2020 | mahesh |

ಕರಾವಳಿ ಕರ್ನಾಟಕದಲ್ಲಿ ತುಳುವರ ಎಲ್ಲ ಶುಭ ಕಾರ್ಯಗಳಿಗೂ ಅಡಿಕೆ ಎಲೆಬೇಕೆ ಬೇಕು. ದೇವರ ಪೂಜೆಯಿಂದ ಹಿಡಿದು ತಿನ್ನುವವರೆಗೂ ಅತಿ ಹೆಚ್ಚಿನ ಉಪಯೋಗ ದೊರೆಯುತ್ತದೆ. ಸಮಸ್ಯೆಗಳಿಲ್ಲದೆ ಮನುಷ್ಯ ಇರುವುದೇ ಇಲ್ಲ ಹಾಗಾಗಿ ಸರ್ವ ರೋಗಕ್ಕೂ ಮನೆ ಮದ್ದು ವೀಳ್ಯದೆಲೆ ಎನ್ನುವ ಮಾತಿದೆ.

Advertisement

ಒಂದು ವೀಳ್ಯದೆಲೆ, ಅದಕ್ಕೆ ಸ್ವಲ್ಪ ಕರೀ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುವುದು.

ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿರುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಜತೆಗೆ ಗ್ಯಾಸ್ಟ್ರಿಕ್‌ ಟ್ರಬಲ್‌ ಅನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ.

ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವಿಳ್ಯದೆಲೆಯನ್ನು ಎದೆಯ ಮೇಲಿಡುವುದರಿಂದ ಉಸಿರಾಟದ ತೊಂದರೆಗೆ ಮುಕ್ತಿ.

ವೀಳ್ಯದೆಲೆಗೆ ಹರಳೆಣ್ಣೆಯನ್ನು ಹಚ್ಚಿ ಅದನ್ನು ಬಿಸಿ ಮಾಡಿ ಹೊಟ್ಟೆ ಉಬ್ಬರದಿಂದ ನರಳುತ್ತಿರುವ ಮಗುವಿನ ಹೊಟ್ಟೆಗೆ ಕಾವು ನೀಡಿದರೆ‌ ನೋವು ಮಾಯವಾಗುತ್ತದೆ.

Advertisement

ಮಕ್ಕಳಲ್ಲಿ ನೆಗಡಿ, ಕೆಮ್ಮು , ಕಫ‌ ಇರುವವರಿಗೆ ವೀಳ್ಯದೆಲೆಯ ರಸ ಅದಕ್ಕೆ ಬಿಳಿ ಈರುಳ್ಳಿಯ ರಸ ಹಾಗೂ ಜೇನುತುಪ್ಪ ಬೆರೆಸಿ, ಅದರಲ್ಲಿ ಶುದ್ಧ ಇಂಗನ್ನು ಸೇರಿಸಿ ದಿನಕ್ಕೆ 3 ರಿಂದ 4 ಬಾರಿ ಸೇವಿಸಿದರೆ ತುಂಬಾ ಪರಿಣಾಮಕಾರಿ.

ಕೂದಲು ಉದುರುವಿಕೆಗೆ 2 ಕಪ್‌ ಕೊಬ್ಬರಿ ಎಣ್ಣೆಗೆ ಅರ್ಧ ಕಪ್‌ ವಿಳ್ಯದೆಲೆ ರಸ ಮತ್ತು ಅರ್ಧ ಕಪ್‌ ಒಂದೆಲಗ ರಸ ಬೆರೆಸಿ ಚೆನ್ನಾಗಿ ಕುದಿಸಿ ನಿತ್ಯ ಹಚ್ಚಿ ಮಾಲೀಸು ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ವೀಳ್ಯದೆಲೆಯನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ, ಬಳಿಕ ಸೋಸಿ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು, ಊತ ಗುಣವಾಗುತ್ತದೆ.

ತೀವ್ರ ಹಲ್ಲು ನೋವಿದ್ದಾಗ ವೀಳ್ಯದೆಲೆಯ ರಸದಲ್ಲಿ ಲವಂಗದ ಹುಡಿಯನ್ನು ಬೆರೆಸಿ ಅದರಲ್ಲಿ ಅದ್ದಿದ ಹತ್ತಿಯನ್ನು ನೋವಿರುವ ಭಾಗದಲ್ಲಿ ಇರಿಸಿಬೇಕು.

ಗರ್ಭಿಣಿ ಸ್ತ್ರೀಯರಲ್ಲಿ ವಾಕರಿಕೆ ,ಬಿಕ್ಕಳಿಕೆ ಉಂಟಾದಾಗ 2 ವೀಳ್ಯದೆಲೆಯಲ್ಲಿ ಅಡಿಕೆಯ ಚೂರನ್ನು ಇಟ್ಟು ಜತೆಗೆ 4 ಏಲಕ್ಕಿ ಕಾಳು ಇಟ್ಟು ಜಗಿದು ರಸ ಹೀರಿದರೆ ಶಮನಕಾರಿ.

ಗಾಯ ಉಂಟಾದಾಗ ತುರಿಕೆ ಕಜ್ಜಿಗಳಿಗೆ ವಿಳ್ಯದೆಲೆಯ ರಸದಲ್ಲಿ ನಾಲ್ಕರಿಂದ ಆರು ಹನಿಯಷ್ಟು ನಿಂಬೆರಸ ಬೆರೆಸಿ ಹಚ್ಚಿದರೆ ಬೇಗ ಗುಣವಾಗುತ್ತದೆ.ವೀಳ್ಯದೆಲೆಯನ್ನು ಕಾವಲಿಯ ಮೆಲೆ ಬೆಚ್ಚಗೆ ಮಾಡಿ ಅದಕ್ಕೆ ಕರ್ಪೂರ ಬೆರೆಸಿ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಕಡಿಮೆಯಾಗುತ್ತದೆ.

 ವಿಜಿತಾ ಅಮೀನ್‌ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next