Advertisement

ಸರ್ವ ಧರ್ಮ ಸಮನ್ವಯವೇ ಭಾರತೀಯ ಪರಂಪರೆ

06:30 AM Jan 16, 2018 | |

ಮೈಸೂರು: ಸರ್ವಧರ್ಮ ಸಮನ್ವಯವೇ ಭಾರತೀಯ ಪರಂಪರೆ. ಇಲ್ಲಿ ಯಾವ ಧರ್ಮವೂ ಮೇಲಲ್ಲ, ಯಾವ
ಧರ್ಮವೂ ಕೀಳಲ್ಲ ಎಂದು ರಾಜ್ಯಪಾಲ ವಿ.ಆರ್‌. ವಾಲಾ ಹೇಳಿದರು. ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಸೋಮವಾರ ನಡೆದ ಧಾರ್ಮಿಕ
ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ದೇಶದಲ್ಲಿ ಇತ್ತೀಚೆಗೆ ಜಾತ್ಯತೀತತೆಯ ಮಾತು ಕೇಳಿಬರುತ್ತಿದೆ. ಆದರೆ,ಸರ್ವಧರ್ಮ ಸಮನ್ವಯವೇ ನಿಜವಾದ ಜಾತ್ಯತೀತತೆ. ಸತ್ಯದ ಆಚರಣೆ, ಅಹಿಂಸೆ, ಬ್ರಹ್ಮಚರ್ಯೆ ಭಾರತೀಯ ಸಂಸ್ಕೃತಿಯ ಪ್ರತೀಕ. ಹಿಂದೂ, ಮುಸ್ಲಿಂ, ಕ್ರೆ„ಸ್ತ, ಪಾರ್ಶಿ ಯಾರೇ ಆಗಿರಲಿ ತಮ್ಮ ಧರ್ಮವನ್ನು ಪಾಲನೆ ಮಾಡಿದಾಗ ಮಾನವರಾಗುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next