ಶ್ರೀರಂಗಪಟ್ಟಣ: ಕೋವಿಡ್ ಹಿನ್ನೆಲೆ ಸಾಂಪ್ರದಾಯಿಕವಾಗಿ ಪಾರಂಪರಿಕ ದಸರಾವನ್ನು ಒಂದು ದಿನಕ್ಕೆ ಸೀಮಿತ ಗೊಳಿಸಿ, ಸಕಲ ಸಿದ್ಧತಾ ಮಾಡಲಾಗುತ್ತಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ತಾಪಂ ಕಚೇರಿ ಆವರಣದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತ ನಾಡಿ,ಕೊರೊನಾಹರಡುತ್ತಿದ್ದು,ಜನರನ್ನುದಸರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲಾಗುವುದಿಲ್ಲ .ಸಾಂಪ್ರ ದಾಯಿಕವಾಗಿ ದಸರಾ ನಡೆಯಲಿದ್ದು, ವಿವಿಧ ಸ್ಥಳಗಳುಹಾಗೂಬೇರೆಕಡೆಗಳಿಂದ ಬರುವ ಜನರನ್ನು ನಿಯಂತ್ರಿಸಲಾಗುತ್ತದೆ ಎಂದರು.
ವಿದ್ಯುತ್ ದೀಪ ಅಳವಡಿಕೆ: ಈಗಾಗಲೇ ಎರಡು ಬಾರಿ ದಸರಾ ಕುರಿತು ಅಧಿಕಾರಿ ಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ದಸರಾ ಸಿದ್ಧತೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿ ವರ್ಷದಂತೆ ವಿದ್ಯುತ್‌ದೀಪ ಅಳವಡಿಸಿ, ಅಲಂಕಾರ ಮಾಡಲಾಗುತ್ತದೆ. ಸರ್ಕಾರಿ ಕಚೇರಿ, ದೇವಾಲಯಗಳಲ್ಲಿ ವಿಶೇಷ ದೀಪಾಲಂಕಾರ ಮಾಡಿ, ಸಾಂಪ್ರದಾಯಿಕ ದಸರಾಕ್ಕೆ ಯಾವುದೆ ತೊಂದರೆ ಇಲ್ಲದೆ, ಕಡಿಮೆ ಜನರನ್ನು ಹೊಂದಿಸಿಕೊಂಡು ದಸರಾ ಆಚರಣೆ ಮಾಡಲಾಗುತ್ತದೆ ಎಂದರು.
ಅನುದಾನಕ್ಕಾಗಿ ಚರ್ಚೆ: ಶ್ರೀರಂಗಪಟ್ಟಣ ದಸರಾಕ್ಕೆ ಸರ್ಕಾರ ಅನುದಾನ ಕುರಿತು, ಹಣಕಾಸಿನ ವ್ಯವಹಾರದಲ್ಲಿ ಮುಖ್ಯ ಮಂತ್ರಿ ಹಾಗೂ ಜಿಲ್ಲಾಧಿಕಾರಿಗಳಲ್ಲಿ ಚರ್ಚೆಮಾಡಲಾಗುತ್ತದೆ. ದಸರಾಕ್ಕೆ ಎಷ್ಟು ಹಣ ನೀಡುವ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಇದಕ್ಕೂ ಮುಂಚಿತವಾಗಿ ದಸರಾ ಮಂಟಪದ ಬಳಿ ಸ್ವಚ್ಛತೆ, ಮಂಟಪಕ್ಕೆ ಬಣ್ಣ, ಕೊಳದ ಬಳಿ ದುರಸ್ತಿ ಎಲ್ಲವೂ ಸಿದ್ಧ ಮಾಡಲಾಗಿದೆ. 23ರಂದು ನಡೆಯುವ ದಸರಾ ಆನೆ ಅಂಬಾರಿ ಇಲ್ಲದೆ ರಥದ ಮೇಲೆ ಚಾಮುಂಡೇಶ್ವರಿ ದೇವಿ ಪೂಜಾ ಅಲಂಕಾರ ಮಾಡಿ, ಮೆರವಣಿಗೆ ನಡೆಸಲಾಗುತ್ತದೆ ಎಂದು ಹೇಳಿದರು.
ದಸರಾಪೂರ್ವಭಾವಿಸಭೆಯಲ್ಲಿ ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದ,ತಹಶೀಲ್ದಾರ್ ಎಂ.ವಿ.ರೂಪಾ, ತಾಪಂಇಒ ಭೈರಪ್ಪ ಸೇರಿದಂತೆ ಪುರಸಭಾ ಅಧಿಕಾರಿಗಳು ಹಾಜರಿದ್ದರು.
ಕೋವಿಡ್ ಬಗ್ಗೆ ತಾತ್ಸಾರಬೇಡ : ಕಳೆದ 15 -20 ದಿನಗಳಿಂದ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಅವರ ಪತ್ನಿ, ತಾಯಿಗೆ ಕೋವಿಡ್ ದೃಢವಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ನಂತರ ಆರೋಗ್ಯವಾಗಿದ್ದು, ಶಾಸಕ ರವೀಂದ್ರ ಶ್ರೀಕಂಠಯ್ಯ ದಸರಾ ಮಹೋತ್ಸವದ ಅಧಿಕಾರಿಗಳ ಸಭೆಗೆ ಬೆಂಗಳೂರಿನಿಂದ ನೇರವಾಗಿ ಶ್ರೀರಂಗಪಟ್ಟಣ ತಾಪಂಗೆ ಆಗಮಿಸಿದರು. ನಂತರಕಾರ್ಯಕರ್ತರು ಹಾರ ಹಾಕಿ ಸ್ವಾಗತಿಸಲು ಬಂದ ವೇಳೆ ಕೋವಿಡ್ ಬಗ್ಗೆ ತಾತ್ಸಾರ ಬೇಡ. ಸಾಮಾಜಿಕ ಅಂತರಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಮಾತನಾಡಿ, ಗುಂಪು ಗುಂಪು ಸೇರಬೇಡಿ. ನಿಮ್ಮ ಆರೋಗ್ಯಕಾಪಾಡಿಕೊಳ್ಳಿ ಎಂದು ಕಾರ್ಯಕರ್ತರಿಗೆ ಎಚ್ಚರಿಸಿದರು.