Advertisement

ಎಲ್ಲ  ಸ್ಥಾನಗಳಿಗೂ ಸ್ಪರ್ಧೆ: ಎಚ್‌ಡಿಕೆ

12:51 PM Apr 18, 2017 | Team Udayavani |

ಮಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 224 ಸ್ಥಾನಗಳಲ್ಲೂ ಪಕ್ಷ ಸ್ಪರ್ಧಿಸಲಿದೆ ಹಾಗೂ ಯಾವುದೇ ಪಕ್ಷದ ಜತೆ ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.

Advertisement

ಜೆಡಿಎಸ್‌ಗೆ ಬಹುಮತ ಲಭಿಸುವ ಭರವಸೆ ಇದೆ. ಉತ್ತರ ಕರ್ನಾಟಕದ ಪ್ರವಾಸ ವೇಳೆ ಜನತೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಂದೊಮ್ಮೆ ಬಹುಮತ ಲಭಿಸದಿದ್ದರೆ ಸರಕಾರ ರಚನೆ ಕುರಿತಂತೆ ಜೆಡಿಎಸ್‌ ಯಾರ ಜತೆಯೂ ಮೈತ್ರಿ ಅಥವಾ ಹೊಂದಾಣಿಕೆ ಮಾಡಿಧಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್‌ ಹಾಗೂ ಬಿಜೆಪಿ ಜತೆ ಹೊಂದಾಣಿಕೆ ಮಾಡಿ ಅನುಭವವಾಗಿದೆ. ಸ್ಪಷ್ಟ ಬಹುಮತ ಲಭಿಸದಿದ್ದರೆ ಮತ್ತೆ ಚುನಾಧಿವಣೆಗೆ ಹೋಗಲಿದೆ ಎಂದರು.

ಸ್ಥಳೀಯ ನಾಯಕರ ತೀರ್ಮಾನ
ಜೆಡಿಎಸ್‌ ಬಿಬಿಎಂಪಿ ಹಾಗೂ ಕೆಲವು ನಗರಾಡಳಿತ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಸ್ಥಳೀಯವಾಗಿ ಪಕ್ಷದ ನಾಯಕರು ಅಲ್ಲಿನ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧರಿಸುತ್ತಾರೆ ಎಂದರು.

ಬರ ನಿರ್ವಹಣೆಯಲ್ಲಿ  ವಿಫಲ
ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ರಾಜ್ಯ ಸರಕಾರ ಲಘುವಾಗಿ ಪರಿಗಣಿಸಿದೆ. ಉಪಚುನಾವಣೆಯಲ್ಲೇ ಕಾಲ ಕಳೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಸಚಿವರು ಚುನಾವಣೆ ಬಳಿಕ ದಿಲ್ಲಿ ಭೇಟಿಧಿಯಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 1,650 ಕೋ.ರೂ. ರೈತರಿಗೆ ವಿತರಣೆಧಿಯಾಗಿಲ್ಲ. ಮೇವು ಕೊರತೆ ಕಾಡುತ್ತಿದ್ದು ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದರೂ ಇದಕ್ಕೆ ಸರಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ನಾವು ಏನೇ ಮಾಡಿದರೂ ಜನ ಹೊಂದಿಕೊಳ್ಳುತ್ತಾರೆ ಎಂಬ ಉಡಾಫೆ ಧೋರಣೆ ಸರಕಾರದ್ದಾಗಿದೆ ಎಂದರು.

Advertisement

ದ.ಕ. ಜಿಲ್ಲೆ ಬೆಂಗಳೂರು ನಗರಕ್ಕೆ ಸರಿಸಮಾನವಾಗಿ ಬೆಳೆಯುತ್ತಿದೆ. ಇಲ್ಲಿ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಆದರೆ ಸೌಹಾರ್ದ ಕಾಯ್ದುಕೊಳ್ಳುವಲ್ಲಿ ಸರಕಾರ ವಿಫಲಧಿವಾಗಿದೆ ಎಂದವರು ಟೀಕಿಸಿದರು.

ರಾಜ್ಯ ಉಪಾಧ್ಯಕ್ಷ ಅಮರನಾಥ ಶೆಟ್ಟಿ, ಶಾಸಕ ಬಿ.ಬಿ. ನಿಂಗಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್‌, ರಾಜ್ಯ ಕಾರ್ಯದರ್ಶಿ ಎಂ.ಬಿ. ಸದಾಶಿವ, ಕೋರ್‌ ಕಮಿಟಿ ಸದಸ್ಯ ಹೈದರ್‌ ಪರ್ತಿಪ್ಪಾಡಿ, ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಂಞಿ, ಕಾರ್ಪೊರೇಟರ್‌, ಅಕ್ಷಿತ್‌ ಸುವರ್ಣ, ನಾಸಿರ್‌, ಧನ್‌ರಾಜ್‌, ಶ್ರೀನಾಥ್‌ ರೈ ಉಪಸ್ಥಿತರಿದ್ದರು.

ದ.ಕ.ದಲ್ಲಿ  ಸ್ಥಾನಗಳಿಸಲು ಯತ್ನ
ದ.ಕ. ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕೋರ್‌ ಕಮಿಟಿ ರಚಿಸಿದ್ದು ಪಕ್ಷ ಸಂಘಟನೆಯಲ್ಲಿ ತೊಡಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 2 ಸ್ಥಾನಧಿಗಳನ್ನಾದರೂ ಗೆಲ್ಲಬೇಕು ಎಂಬುದು ನಮ್ಮ ಗುರಿಧಿಯಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next