Advertisement
ವಿಪಕ್ಷಗಳು ಕನ್ವರ್ ಯಾತ್ರಾ ಮಾರ್ಗದಲ್ಲಿ ಉಪಹಾರ ಗೃಹಗಳಿಗೆ ಮಾಲಕರ ಹೆಸರು ಹಾಕುವ ಉತ್ತರ ಪ್ರದೇಶ ಸರ್ಕಾರದ ಆದೇಶದಂತಹ ವಿವಾದಾತ್ಮಕ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ, ಪ್ರತಿಷ್ಠಿತ ನೀಟ್ ಸೇರಿದಂತೆ ಪರೀಕ್ಷಾ ಪತ್ರಿಕೆ ಸೋರಿಕೆ ವಿಚಾರ ಚರ್ಚೆಗೆ ಅವಕಾಶ ನೀಡುವಂತೆ ಕೋರಿದವು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ನಿರಂತರ ದಾಳಿಗಳು, ಮಣಿಪುರ ಪರಿಸ್ಥಿತಿ, ರೈಲು ಅಪಘಾತಗಳು, ನಿರುದ್ಯೋಗ ಮತ್ತು ಬೆಲೆ ಏರಿಕೆ ಸೇರಿದಂತೆ ಇತರ ಹಲವು ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯ ಅಗತ್ಯದ ಕುರಿತು ಚರ್ಚಿಸಲಾಗಿದೆ.
Related Articles
Advertisement
ಕಾಂಗ್ರೆಸ್ ನಾಯಕ ಕೆ. ಸುರೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪ್ರದಾಯದ ಪ್ರಕಾರ ಲೋಕಸಭೆಯ ಉಪಸಭಾಪತಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದು,ಇಂಡಿಯಾ ಮೈತ್ರಿಕೂಟದ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಸಣ್ಣ ಪಕ್ಷಗಳಿಗೂ ಅವಕಾಶಹಿಂದಿನ ಸಂಪ್ರದಾಯ ಮುರಿದ ಕೇಂದ್ರ ಸರಕಾರ ತನ್ನ ರಾಜಕೀಯ ಪ್ರಭಾವವನ್ನು ಸೂಚಿಸಲು ಹಲವಾರು ಸಣ್ಣ ಪಕ್ಷಗಳನ್ನು ಸಭೆಗೆ ಆಹ್ವಾನಿಸಿತ್ತು. ಕೇವಲ ಒಬ್ಬ ಸಂಸದರನ್ನು ಒಳಗೊಂಡ ಪಕ್ಷಕ್ಕೂ ಅವಕಾಶ ನೀಡಲಾಗಿತ್ತು.ನಿಯಮಗಳಿಗೆ ಅನುಸಾರವಾಗಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ತನ್ನ ಇಚ್ಛೆಯನ್ನು ತಿಳಿಸಲು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೂಚಿಸಿದರು. ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ರಿಜಿಜು, 44 ಪಕ್ಷಗಳ 55 ನಾಯಕರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದು ಉಪಯುಕ್ತ ಚರ್ಚೆ ನಡೆಯಿತು ಎಂದು ಹೇಳಿದ್ದಾರೆ.