Advertisement

ಮನೆಯಿಂದಲೇ ಮತದಾನ ಅವಕಾಶ

12:45 AM Dec 31, 2021 | Team Udayavani |

ಲಕ್ನೋ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮನೆಯಿಂದಲೇ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.  ಜತೆಗೆ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಹಾಗೂ ಮತದಾನ ಕೇಂದ್ರಕ್ಕೆ ಆಗಮಿಸಲು ಸಾಧ್ಯವಾಗದಿರುವ  ಅಂಗವಿಕಲರಿಗೆ ಮನೆಯಿಂದಲೇ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸುವ ಹೊಸ ವ್ಯವಸ್ಥೆ ಮೊದಲ ಬಾರಿಗೆ ಜಾರಿಗೆ ಬರಲಿದೆ.

Advertisement

ಮೂರು ದಿನಗಳ ಉತ್ತರ ಪ್ರದೇಶ ಭೇಟಿ ಬಳಿಕ ಗುರುವಾರ ಸುದ್ದಿಗೋಷ್ಠಿಯಲ್ಲಿ  ಮುಖ್ಯ ಚುನಾವಣ ಆಯುಕ್ತ ಸುಶೀಲ್‌ ಚಂದ್ರ ಈ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಐದು ರಾಜ್ಯಗಳ ಚುನಾವಣೆಗಳ ವೇಳಾಪಟ್ಟಿ ಪ್ರಕಟವಾಗಲಿದೆ.

ಪ್ರಸಕ್ತ ಸಾಲಿನಲ್ಲಿ ಮತ ಗಟ್ಟೆಗೆ ಬಂದು ಹಕ್ಕು ಚಲಾಯಿಸಲು ಕಷ್ಟ  ಎದುರಿಸು ವವರಿಗೆ ನೆರವಾಗಲು  ಆಯೋಗವೇ ಅಂಥವರ ಮನೆ ಬಾಗಿಲಿಗೆ ತೆರಳಲಿದೆ. ಈ ಪ್ರಕ್ರಿಯೆಯನ್ನು ವೀಡಿಯೋ ಮೂಲಕ ದೃಢೀಕರಿಸಲಾಗುತ್ತದೆ. ಅಂದರೆ ನಿಗದಿತ ವ್ಯಕ್ತಿ ಯಾವ ಪಕ್ಷದ ಅಭ್ಯರ್ಥಿಗೆ ಮತ ನೀಡಿದ್ದಾನೆ ಎನ್ನುವುದನ್ನು ಚಿತ್ರೀಕರಿಸಲಾಗುವುದಿಲ್ಲ. ಅವರು ಹಕ್ಕು ಚಲಾವಣೆ ಮಾಡಿದ್ದಾರೆ ಎಂಬುದನ್ನು ಮಾತ್ರ ದೃಢೀಕರಿಸಲಾಗುತ್ತದೆ.  ಮನೆಯಲ್ಲಿ ಯಾರು ಹಕ್ಕು ಚಲಾವಣೆ ಮಾಡುತ್ತಾರೆ ಎಂಬ ಮತ ದಾರರ ಪಟ್ಟಿಯನ್ನು ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಗುತ್ತದೆ ಎಂದು ಸುಶೀಲ್‌ ಚಂದ್ರ ಅವರು ಹೇಳಿದ್ದಾರೆ.

ಹೆಚ್ಚುವರಿ ಮತಗಟ್ಟೆ :

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 11 ಸಾವಿರ ಹೆಚ್ಚುವರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ಆಯುಕ್ತರು ಹೇಳಿದ್ದಾರೆ.

Advertisement

ಹಾಲಿ ಸನ್ನಿವೇಶದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚುವರಿ ಬೂತ್‌ಗಳನ್ನು ರಚಿಸಲಾಗುತ್ತದೆ. ಹೀಗಾಗಿ, ಒಟ್ಟು ಬೂತ್‌ಗಳ ಸಂಖ್ಯೆ 1,74, 351ಕ್ಕೆ ಏರಿಕೆಯಾಗಲಿದೆ.  ಜತೆಗೆ ಒಂದು ಗಂಟೆ ಹೆಚ್ಚುವರಿಯಾಗಿ ಹಕ್ಕು ಚಲಾವಣೆಗೆ ಅವಕಾಶ ನೀಡಲಾಗುತ್ತದೆ ಎಂದು  ಆಯುಕ್ತರು ತಿಳಿಸಿದ್ದಾರೆ.

ರಾಜ್ಯಗಳದ್ದೇ ಹೊಣೆ :

ಚುನಾವಣ ರ್ಯಾಲಿಗಳನ್ನು ನಿಯಂತ್ರಿ ಸಲು  ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಉತ್ತರಿಸಿದ ಆಯುಕ್ತರು, “ವೇಳಾಪಟ್ಟಿ ಪ್ರಕಟಿಸಿದ ಬಳಿಕ ಆಯೋಗದ ಹೊಣೆ ಶುರುವಾಗುತ್ತದೆ. ಅಲ್ಲಿಯವರೆಗೆ ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಸಹಿತ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಆಯಾ ರಾಜ್ಯ ಸರಕಾರಗಳ ಹೊಣೆ’ ಎಂದರು.

ಲಸಿಕೆ ಕಡ್ಡಾಯ :

ಚುನಾವಣೆ ಕರ್ತವ್ಯದಲ್ಲಿರುವ ಎಲ್ಲರೂ ಕಡ್ಡಾಯವಾಗಿ 2 ಡೋಸ್‌ ಲಸಿಕೆ ಪಡೆದಿರಬೇಕು ಎಂದು  ಆಯುಕ್ತರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next