Advertisement
ಗಣಿಗಾರಿಕೆ ವಲಯದ ಶಾಸಕರಾದ ಗಣೇಶ್ ಗಾಂವ್ಕರ್, ಪ್ರೇಮೇಂದ್ರ ಶೇಟ್, ಡಾ.ಚಂದ್ರಕಾಂತ ಶೇಟ್ಯೇ ಅವರು ಗೋವಾ ವಿಧಾನಸಭಾ ಅಧಿವೇಶನ ಕಲಾಪದಲ್ಲಿ ನೀಡಿದ ಮಹತ್ವದ ಸಲಹೆಯನ್ನು ಕುರಿತು ಸಿಎಂ ಸಾವಂತ್ ಮಾತನಾಡಿದರು. ಪ್ರತಿಪಕ್ಷದ ನಾಯಕ ಮೈಕೆಲ್ ಲೋಬೋ ಮತ್ತು ಗೋವಾ ಫಾರ್ವರ್ಡ್ ಶಾಸಕ ವಿಜಯ್ ಸರ್ದೇಸಾಯಿ ಅವರು ಕಾರ್ಮಿಕರ ಹಿತಾಸಕ್ತಿಗಳನ್ನು ಸರ್ಕಾರ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
Related Articles
Advertisement
ಗೋವಾ ವಿಧಾನಸಭಾ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿದರು. ಗೋವಾ ಶಿಪ್‌ಯಾರ್ಡ್, ಮೊರ್ಮುಗೋವಾ ಪೋರ್ಟ್ ಟ್ರಸ್ಟ್ ಮುರ್ಗಾಂವ್ ಕ್ಷೇತ್ರದ ಪ್ರಮುಖ ಯೋಜನೆಗಳಾಗಿವೆ. ಇಲ್ಲಿನ ಬಂದರಿನ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಸಾಗಣೆಯಾಗುತ್ತದೆ. ಇದು ದೊಡ್ಡ ಕಂಪನಿಗಳನ್ನು ಒಳಗೊಂಡಿರುತ್ತದೆ. ಆದರೆ ಇಲ್ಲಿನ ಸಿಬ್ಬಂದಿ ಹಾಗೂ ಕಾರ್ಮಿಕರು ಹೊರ ರಾಜ್ಯದವರು. ಇಲ್ಲಿ ನೆಲೆಸಿರುವ ಹೊರ ರಾಜ್ಯದ ಜನರು ಆರ್ಥಿಕ ಲಾಭವನ್ನು ಪಡೆಯುತ್ತಿದ್ದರೆ ಸ್ಥಳೀಯರು ಕಲ್ಲಿದ್ದಲು ಮಾಲಿನ್ಯದ ಸಮಸ್ಯೆಯನ್ನು ಅನುಭವಿಸಬೇಕಾಗಿದೆ ಎಂದು ಅಮೋಣಕರ್ ಆರೋಪಿಸಿದರು.
ಕಳೆದ ಹಲವು ವರ್ಷಗಳಿಂದ ಮೋರಗಾಂವ ಮತಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಬೈನಾ ಕಡಲತೀರದಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಯಾವುದೇ ಸೌಲಭ್ಯಗಳಿಲ್ಲ. ಸರ್ಕಾರ ಈ ಮೀನುಗಾರ ಸಮುದಾಯವನ್ನು ನಿರ್ಲಕ್ಷಿಸುತ್ತಿದೆ. ಈ ಸ್ಥಳದಲ್ಲಿ ಸುಮಾರು ೩೦೦ ರಿಂದ ೩೫೦ ಸಾಂಪ್ರದಾಯಿಕ ಮೀನುಗಾರರು ಇದ್ದಾರೆ. ಕರಾವಳಿ ಕಾನೂನು ಅವರ ವ್ಯಾಪಾರವನ್ನು ನಿರ್ಬಂಧಿಸುತ್ತದೆ ಮತ್ತು ಮಳೆಗಾಲದಲ್ಲಿ ಅವರು ತಮ್ಮ ದೋಣಿಗಳನ್ನು ಬೇರೆಡೆಗೆ ಸಾಗಿಸಬೇಕಾಗುತ್ತದೆ. ಯಾವುದೇ ಸೌಲಭ್ಯವಿಲ್ಲ ಎಂದು ಅಮೋಣಕರ್ ಹೇಳಿದರು.