Advertisement

ಎಲ್ಲ ಭಾಷೆಗಳ ನೀಟ್‌ ಪ್ರಶ್ನೆ ಪತ್ರಿಕೆಗಳೂ ಏಕರೀತಿ ಇರಬೇಕು

06:25 AM Aug 11, 2017 | Team Udayavani |

ಹೊಸದಿಲ್ಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್‌)ಯ ಎಲ್ಲ ಭಾಷೆ  ಪ್ರಶ್ನೆಪತ್ರಿಕೆಗಳೂ ಏಕರೀತಿಯ ಪ್ರಶ್ನೆಗಳನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್‌ ಸಿಬಿಎಸ್‌ಇಗೆ ಸೂಚಿಸಿದೆ. 

Advertisement

ಅಲ್ಲದೇ ಮುಂದಿನ ವರ್ಷ ನೀಟ್‌ ಪರೀಕ್ಷೆ ನಡೆಸುವಾಗ ಯಾವ ರೀತಿ ತದ್ರೂಪ ಪ್ರಶ್ನೆಪತ್ರಿಕೆಗಳನ್ನು ತಯಾರಿಸುತ್ತೀರಿ ಎಂಬ ಬಗ್ಗೆ ವರದಿ ನೀಡುವಂತೆಯೂ ನಿರ್ದೇಶಿಸಿದೆ. ಪ್ರಾದೇಶಿಕ ಭಾಷೆಯ ನೀಟ್‌ ಪ್ರಶ್ನೆಪತ್ರಿಕೆ ಗಳು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯ ಪ್ರಶ್ನೆಗಳಿಗಿಂತಲೂ ಕಷ್ಟಕರವಾಗಿದ್ದವು ಎಂದು ಆರೋಪಿಸಿ ವಿದ್ಯಾರ್ಥಿಗಳ ಗುಂಪೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಸಿಬಿಎಸ್‌ಇ ಈ ಆರೋಪವನ್ನು ಅಲ್ಲಗಳೆದಿತ್ತು. 
 

Advertisement

Udayavani is now on Telegram. Click here to join our channel and stay updated with the latest news.

Next