Advertisement

KSRTC ಪ್ರಯಾಣಿಕರಿಗೆ ಸಿಹಿಸುದ್ದಿ; ಉಚಿತ ಇಂಟರ್ನೆಟ್ ಬಳಸಿ ಪ್ರಯಾಣಿಸಿ

06:21 PM Jun 25, 2018 | Sharanya Alva |

ಭಾರತದ ಸಾರಿಗೆ ವ್ಯವಸ್ಥೆಯಲ್ಲೇ ಅತ್ಯುನ್ನತ ಸೇವೆಗಳನ್ನು ನೀಡುತ್ತಿರುವ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆ, ಇದೀಗ ತನ್ನ ಪ್ರಯಾಣಿಕರಿಗೆ ಉಚಿತ ಡೇಟಾ ನೀಡಲಿದ್ದು ಇನ್ಮುಂದೆ ಪ್ರಯಣದುದ್ದಕ್ಕೂ ಸ್ಮಾರ್ಟ್ಫೋನ್’ಲ್ಲಿ ಉಚಿತವಾಗಿ ಸಿನೆಮಾ, ಧಾರಾವಾಹಿ, ರಿಯಾಲಿಟಿ ಶೋ ಹಾಗ0ೂ ಇನ್ನೂ ಹೆಚ್ಚಿನ ಮನರಂಜನೆಯನ್ನು  ಸವಿಯಬಹುದು.

Advertisement

ಈ ರೀತಿಯ ಉಚಿತ ಇಂಟರ್ನೆಟ್ ಸೇವೆ ಖಾಸಗಿ ಸಾರಿಗೆಗಳಲ್ಲಿ ದೊರೆಯುತ್ತಿತ್ತು ಆದರೆ ಇದೀಗ ಕೆ.ಎಸ್.ಆರ್.ಟಿ.ಸಿ ಕೂಡ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಈ ಯೋಜನೆಯನ್ನು ರೂಪಿಸಿದ.

ಕಿವಿ – ವೂಟ್.ಕಾಂ’ನ ಒಪ್ಪಂದದೊಂದಿಗೆ ವೈ-ಫೈ ಹಾಟ್ ಸ್ಪಾಟ್ ಸೇವೆಯನ್ನು ಸರ್ಕಾರಿ ಬಸ್ಸುಗಳಲ್ಲಿ ಅಳವಡಿಸಲಾಗಿದ್ದು, ವೈ-ಫೈ ಮೂಲಕ ಉಚಿತವಾಗಿ ಸಂಪರ್ಕಿಸಿಕೊಂಡು ಮನೋರಂಜನೆ ಪಡೆಯಬಹುದು.

ಇದನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ಸಂಪರ್ಕ ಪಡೆಯಬಹುದು:

Advertisement

◆ ಮೊದಲು ಸೆಟ್ಟಿಂಗ್ ಗೆ ಹೋಗಿ ವೈ-ಫೈ ಕ್ಲಿಕ್ ಮಾಡಿ.
◆ Wi-Fi / WLAN ಶುರು ಮಾಡಿದ ನಂತರ ಕೆಳಗಿರುವ ಲಿಸ್ಟ್’ ನಲ್ಲಿ KIVI ಎಂಬ ನೆಟ್ವರ್ಕ್ ಆಯ್ಕೆ ಮಾಡಿ.
◆ ಈಗ ಸೆಟ್ಟಿಂಗ್ ನಿಂದ ಹೊರಗೆ ಬಂದು ಗೂಗಲ್ ಕ್ರೋಮ್ / ಸಫಾರಿ ಇತರೆ ( ಬ್ರೌಸರ್) ತೆರೆಯಿರಿ.
◆ ಬ್ರೌಸರ್’ನಲ್ಲಿ  www.voot.com ಅಂತ ಟೈಪ್ ಮಾಡಿ ಮುಂದುವರೆಯಿರಿ ಹಾಗೂ ಆರಾಮವಾಗಿ ಕುಳಿತು ಚಲನಚಿತ್ರ ಮತ್ತು ಇತರ ಕಾರ್ಯಕ್ರಮವನ್ನು ಸವಿಯಿರಿ.

ಈ ಉಚಿತ ಡೇಟಾ ಯೋಜನೆಯಲ್ಲಿ ನೀವು ಕೇವಲ www.voot.com ಮಾತ್ರ ಬಳಸಿಕೊಳ್ಳಬಹುದಾಗಿದ್ದು ಫೇಸ್ಬುಕ್, ವಾಟ್ಸಾಪ್, ಯೌಟ್ಯೂಬ್ ಹಾಗೂ ಇನ್ನಿತರ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ ಹಾಗೂ ಈ ಸೇವೆ ಪ್ರಾರಂಭಿಕ ಹಂತದಲ್ಲಿದ್ದು ಒಂದಿಷ್ಟು ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಇದು ಲಭ್ಯವಿದೆ ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಂತ ಎಲ್ಲ ಬಸ್ಸುಗಳಲ್ಲೂ ಈ ಸೇವೆ ದೊರೆಯುವ ಸಾಧ್ಯತೆಗಳಿವೆ.

 *ಸೂರಜ್ ಅಣ್ವೇಕರ್, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next