Advertisement

ಕಾಸರಗೋಡಿನಲ್ಲಿ ಕನ್ನಡ ಉಳಿಸಲು ಎಲ್ಲ ಕನ್ನಡಿಗರು ಒಟ್ಟಾಗಿ ಯತ್ನಿಸಬೇಕು

07:10 AM Sep 10, 2017 | |

ಕಾಸರಗೋಡು: ಕಾಸರಗೋಡಿನಲ್ಲಿ ಕನ್ನಡದ ಮೇಲೆ ದಬ್ಟಾಳಿಕೆ ಹೆಚ್ಚುತ್ತಿದೆ. ಸರಕಾರಿ ಆದೇಶ, ಸುತ್ತೋಲೆ, ವ್ಯವಹಾರಗಳೆಲ್ಲಾ ಮಲಯಾಳಮಯ ವಾಗಿದೆ. ಕನ್ನಡಕ್ಕಾಗಿ ಧ್ವನಿ ಯೆತ್ತುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕಾಸರಗೋಡಿನಲ್ಲಿ ಕನ್ನಡ ಉಳಿಸಲು ಅಧ್ಯಾಪಕರು, ವಿದ್ಯಾರ್ಥಿಗಳು, ಸರ್ವ ಕನ್ನಡಿಗರು ಒಂದಾಗಿ ಪ್ರಯತ್ನಿಸ ಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್‌. ವಿ. ಭಟ್‌ ಹೇಳಿದರು.

Advertisement

ಕಾಸರಗೋಡಿನ ನುಳ್ಳಿಪ್ಪಾಡಿ ಸರಕಾರಿ ಯು.ಪಿ. ಶಾಲೆಯಲ್ಲಿ ನಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು – ಬೇಕಲ – ಹೊಸದುರ್ಗ ಉಪಜಿಲ್ಲೆಗಳ ಜಂಟಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹರೀಶ್‌ ಎಡನೀರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಉಪಜಿಲ್ಲಾಧಿಕಾರಿ ನಂದಿಕೇಶನ್‌ ಎನ್‌., ಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ, ಅಧ್ಯಾಪಕರ ಸಂಘದ ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ, ಪ್ರಧಾನ ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಭಟ್‌, ನಿಕಟಪೂರ್ವ ಅಧ್ಯಕ್ಷ ಮಹಾಲಿಂಗೇಶ್ವರ ಭಟ್‌ ಎಂ.ವಿ. ಶುಭಹಾರೈಸಿದರು.  ಕಾಸರಗೋಡು ಉಪಜಿಲ್ಲಾ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಸ್ವಾಗತಿಸಿದರು. ಬೇಕಲ ಉಪಜಿಲ್ಲಾ ಕೋಶಾಧಿಕಾರಿ ರಜನಿ ಕುಮಾರಿ ವಂದಿಸಿ ದರು. ಬಾಬು ಬಂದಡ್ಕ ಕಾರ್ಯಕ್ರಮ ನಿರೂಪಿಸಿದರು. 

ಉಪಜಿಲ್ಲೆಗಳ ವರದಿ, ಲೆಕ್ಕಪತ್ರ ಮಂಡನೆಯ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಲ್ಲಕಟ್ಟ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ್‌ ಪ್ರಸಾದ್‌ ಅಧ್ಯಕ್ಷರಾಗಿ, ಬೋವಿಕ್ಕಾನ ಎಯುಪಿ ಶಾಲಾ ಅಧ್ಯಾಪಕ ಪ್ರದೀಪ್‌ ಕುಮಾರ್‌ ಕಾರ್ಯ ದರ್ಶಿಯಾಗಿ ಆಯ್ಕೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next