Advertisement

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

01:31 AM Apr 26, 2024 | Team Udayavani |

ಹೊಸದಿಲ್ಲಿ: ಸಂಪೂರ್ಣ ಡಿಜಿಟಲೀಕರಣದತ್ತ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿರುವ ಸುಪ್ರೀಂ ಕೋರ್ಟ್‌, ವಕೀಲರಿಗೆ ದಾವೆ ಪಟ್ಟಿ ಸೇರಿದಂತೆ ಎಲ್ಲ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಮೂಲಕ ರವಾನಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ.

Advertisement

ಪ್ರಕರಣವೊಂದರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಯು, ಸುಪ್ರೀಂ ಕೋರ್ಟ್‌ನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(ಐಸಿಟಿ) ವ್ಯವಸ್ಥೆ ಜತೆಗೆ ವಾಟ್ಸ್‌ಆ್ಯಪ್‌ ಸೇವೆಯನ್ನು ಸಂಯೋಜನೆ ಮಾಡಿರುವುದನ್ನು ಘೋಷಿಸಿದರು. ಪ್ರಕರಣ ಸಂಬಂಧ ಹಾಜರಾಗುವ ವಕೀಲರಿಗೆ ದಾವೆ ಪಟ್ಟಿಗಳು, ಆದೇಶಗಳು, ತೀರ್ಪುಗಳು ಸೇರಿ ಎಲ್ಲ ಮಾಹಿತಿಯು ವಾಟ್ಸ್‌ಆ್ಯಪ್‌ ಮೂಲಕ ಸ್ವಯಂ ಆಗಿ ರವಾನೆಯಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next