ಹೊಸದಿಲ್ಲಿ: ಅಫ್ಘಾನಿಸ್ಥಾನದಲ್ಲಿ ನಮ್ಮ ಸೇನೆಯನ್ನು ನಿಯೋಜನೆ ಮಾಡುವುದಿಲ್ಲ ಎಂದು ಕೇಂದ್ರ ಸರಕಾರ ಅಮೆರಿಕಕ್ಕೆ ಸ್ಪಷ್ಟಪಡಿಸಿದೆ. ಆದರೆ ವೈದ್ಯಕೀಯ ಮತ್ತು ಇತರ ಅಭಿವೃದ್ಧಿ ನೆರವು ಮುಂದುವರಿ ಸುವುದಾಗಿ ತಿಳಿಸಿದೆ. ಭಾರತ ಪ್ರವಾಸದಲ್ಲಿರುವ ಅಮೆರಿಕ ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಜತೆ ಮಾತುಕತೆ ವೇಳೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಚಾರ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಮ್ಯಾಟಿಸ್ ಅವರು, ಪಾಕಿಸ್ಥಾನವನ್ನು ಪರೋಕ್ಷವಾಗಿ ಟೀಕಿಸಿ ಉಗ್ರರ ಸ್ವರ್ಗದ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ಸಹನೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಅಲ್ಲಿನ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿದ್ದಾರೆ. ಉತ್ತರ ಕೊರಿಯಾ ಸತತವಾಗಿ ಕ್ಷಿಪಣಿ, ಪರಮಾಣು ಪರೀಕ್ಷೆ ಮತ್ತು ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಚೀನದ ಹಸ್ತಕ್ಷೇಪದಿಂದ ಉಂಟಾಗಿರುವ ತಲ್ಲಣದ ನಡುವೆಯೇ ಈ ಭೇಟಿ ನಡೆದಿದೆ. ಇಬ್ಬರು ನಾಯಕರ ಸಭೆಯಲ್ಲಿ ಈ ಅಂಶಗಳೂ ಪ್ರಸ್ತಾವವಾಗಿವೆ.
ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಚಿವ ಮ್ಯಾಟಿಸ್ ವಿವರಗಳನ್ನು ನೀಡಿದ್ದಾರೆ. ಅಮೆರಿಕದ ಸೂಚನೆಯಂತೆ ಭಾರತ ಅಫ್ಘಾನಿಸ್ಥಾನಕ್ಕೆ ಸೇನೆ ಕಳುಹಿಸಲು ಸಾಧ್ಯವಿಲ್ಲ. ಆದರೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಸಕಾರಾತ್ಮಕ ಮಾತುಕತೆ ನಡೆದಿದೆ. ಭಾರತ ಅಫ್ಘಾನಿಸ್ತಾ ನದಲ್ಲಿ ವೈದ್ಯಕೀಯ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಗಾಯ ಗೊಂಡಿರುವ ಯೋಧರು, ನಾಗರಿಕರಿಗೆ ನೆರವು ನೀಡುವ ಕೆಲಸ ಮುಂದುವರಿ ಸುತ್ತೇವೆ’ ಎಂದು ನಿರ್ಮಲಾ ತಿಳಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿದ ಮ್ಯಾಟಿಸ್ “ಭಾರತದ ಅಭಿಪ್ರಾಯವನ್ನು ಗೌರವಿಸು ತ್ತೇವೆ. ಯುದ್ಧ ಪೀಡಿತ ರಾಷ್ಟ್ರದ ಅಭಿವೃದ್ಧಿಗೆ ಭಾರತ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ಲಾ ಸುತ್ತೇವೆ’ ಎಂದರು.
ವಿಸ್ತೃತ ಸಹಕಾರ: ಅಮೆರಿಕ ಮತ್ತು ಭಾರತದ ನಡುವೆ ವಿಸ್ತೃತ ಸಹಕಾರ ಇದೆ. ಅದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಕ್ಷೇತ್ರಗಳತ್ತ ವಿಸ್ತಾರವಾಗುತ್ತದೆ ಎಂದು ಉಭಯ ನಾಯಕರು ಹೇಳಿದ್ದಾರೆ. ಸಹನೆ ಸಾಧ್ಯವಿಲ್ಲ ಎಲ್‌ಒಸಿಯಾಚೆಯಿಂದ ಪಾಕಿಸ್ಥಾನ ಉಗ್ರರನ್ನು ಕಳುಹಿಸಿಕೊಡುತ್ತಿದೆ. ನೆರೆಹೊರೆ ಯಲ್ಲಿ ಉಗ್ರರ ಒಳ ನುಸುಳುವಿಕೆ ಹೆಚ್ಚಾಗುತ್ತಿದೆ ಎಂದು ಹೇಳಿದ ನಿರ್ಮಲಾ ಅವರು, ಮ್ಯಾಟಿಸ್ ಪಾಕಿಸ್ಥಾನಕ್ಕೆ ಭೇಟಿ ನೀಡಿದಾಗ ಈ ವಿಚಾರ ಪ್ರಸ್ತಾವಿಸುವಂತೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಮ್ಯಾಟಿಸ್, ಉಗ್ರರ ಸ್ವರ್ಗದ ವಿಚಾರದಲ್ಲಿ ಸಹನೆ ಸಾಧ್ಯವಿಲ್ಲ ಎಂದರು.