Advertisement

ಸುಪ್ರೀಂ ಮುಂದೆ ಮಹತ್ವದ ಪ್ರಕರಣಗಳು ; ಚಳಿಗಾಲದ ರಜೆಯ ಅನಂತರ ಇಂದಿನಿಂದ ಕಲಾಪಗಳು ಆರಂಭ

10:04 AM Jan 07, 2020 | Team Udayavani |

ಹೊಸದಿಲ್ಲಿ: ಚಳಿಗಾಲದ ರಜೆಯ ಬಳಿಕ ಸೋಮವಾರದಿಂದ ಪುನರಾರಂಭವಾಗಲಿರುವ ಸುಪ್ರೀಂ ಕೋರ್ಟ್‌ನ ಮುಂದೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪ್ರಕರಣ, ಪೌರತ್ವ ತಿದ್ದುಪಡಿ ಕಾಯ್ದೆ ಮುಂತಾದ ಮಹತ್ವದ ಪ್ರಕರಣಗಳು ವಿಚಾರಣೆಗಾಗಿ ಸಾಲುಗಟ್ಟಿ ನಿಂತಿವೆ. ಇವುಗಳಲ್ಲಿ ಶಬರಿಮಲೆ ಪ್ರಕರಣವೂ ಒಂದಾಗಿದ್ದು ಅದರ ವಿಚಾರಣೆಯನ್ನು ಏಳು ಸದಸ್ಯರ ಸಾಂವಿಧಾನಿಕ ಪೀಠ ನಡೆಸಲಿದೆ. ಕಲಾಪಗಳ ಮೊದಲ ದಿನವೇ, ಟಾಟಾ ಸನ್ಸ್‌ ಕಂಪೆನಿ ಹಾಗೂ ಸೈರಸ್‌ ಮಿಸ್ತ್ರಿ ನಡುವಿನ ವ್ಯಾಜ್ಯ ವಿಚಾರಣೆಗೊಳಪಡುವ ಸಾಧ್ಯತೆ ದಟ್ಟವಾಗಿದೆ.

Advertisement

ಆನಂತರದ ದಿನಗಳಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕೆನೆಪದರಿನಲ್ಲಿ ಇರುವವರಿಗೆ ಮೀಸಲಾತಿ ಅನ್ವಯವಾಗದು ಎಂಬ 2018ರ ಸುಪ್ರೀಂ ಕೋರ್ಟ್‌ನ ತೀರ್ಪನ್ನು 7 ಸದಸ್ಯರ ಪೀಠದಿಂದ ಮತ್ತೆ ವಿಚಾರಣೆಗೊಳಪಡಿಸಬೇಕು ಎಂದು ಕೇಂದ್ರ ಸರಕಾರ ಸಲ್ಲಿಸಿರುವ ಮನವಿಯ ವಿಚಾರಣೆ ಶುರುವಾಗಲಿದೆ.

ಇನ್ನು, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಅನಂತರ ಅಲ್ಲಿ ಹೇರಲಾಗಿರುವ ಪ್ರತಿಬಂಧಕಾಜ್ಞೆಗಳನ್ನು ಪ್ರಶ್ನಿಸಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದ್ದು, ಜ. 22ರಿಂದ ಸಿಜೆಐ ಎಸ್‌.ಎ. ಬೋಬ್ಡೆ ನೇತೃತ್ವದ ಪೀಠದಿಂದ ಪೌರತ್ವ ಕಾಯ್ದೆ ತಿದ್ದುಪಡಿ ಪ್ರಕರಣ ವಿಚಾರಣೆಗೊಳಪಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next