Advertisement
ವನಿತಾ ಸಿಂಗಲ್ಸ್ ವಿಭಾಗದಲ್ಲಿ 5ನೇ ಶ್ರೇಯಾಂಕಿತೆ ಪಿ. ವಿ. ಸಿಂಧು ದಕ್ಷಿಣ ಕೊರಿಯದ ಸಂಗ್ ಜಿ ಹ್ಯುನ್ ಅವರ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಸಿಂಧು ಕಳೆದ 2 ಪಂದ್ಯಗಳಲ್ಲಿ ಸಂಗ್ ಜೀ ಹ್ಯುನ್ ಅವರ ವಿರುದ್ಧ ಸೋತಿದ್ದಾರೆ. ಒಂದು ವೇಳೆ ಸಿಂಧು ಆರಂಭಿಕ ಅಡೆತಡೆಗಳಿಂದ ಹೊರ ಬಂದರೆ ಕ್ವಾರ್ಟರ್ ಫೈನಲ್‌ನಲ್ಲಿ 3ನೇ ಶ್ರೇಯಾಂಕಿತೆ ಚಿನ್ ಯುಫೆಯಿ ಅವರೊಂದಿಗೆ ಮುಖಾಮುಖಿಯಾಗುವ ಸಾಧ್ಯತೆಗಳಿವೆ. 8ನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಆರಂಭಿಕ ಪಂದ್ಯದಲ್ಲಿ ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮೋರ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಆಟಗಾರರೂ ಕೂಡ ಕಠಿನ ಸವಾಲು ಎದುರಿಸಲಿದ್ದಾರೆ. 7ನೇ ಶ್ರೇಯಾಂಕದ ಕೆ. ಶ್ರೀಕಾಂತ್ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ನ ಬ್ರಿಸ್ ಲೆವೆರ್‌ಡ್ಜ್ ಅವರನ್ನು ಎದುರಿಸಲಿದ್ದರೆ, ಭಾರತದವರೇ ಆಗಿರುವ ಎಚ್. ಎಸ್. ಪ್ರಣಯ್-ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ. ಸಮೀರ್ ವರ್ಮ ಡೆನ್ಮಾರ್ಕ್‌ನ ವಿಕ್ಟರ್ ಎಕ್ಸಲ್ಸೆನ್ ಅವರ ವಿರುದ್ಧ ಆಡಲಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ-ಸುಮೀತ್ ರೆಡ್ಡಿ, ವನಿತಾ ಡಬಲ್ಸ್‌ನಲ್ಲಿ ಅಶ್ವಿನ್ ಪೊನ್ನಪ್ಪ- ಎನ್. ಸಿಕ್ಕಿ ರೆಡ್ಡಿ, ಮೇಘನಾ ಜಕ್ಕಂಪು ಡಿ-ಪೂರ್ವಿಶಾ ಎಸ್. ರಾಮ್ ಹಾಗೂ ಮಿಕ್ಸೆಡ್ ಡಬಲ್ಸ್‌ನಲ್ಲಿ ಪ್ರಣಮ್ ಜೆರ್ರಿ ಜೋಪ್ರಾ- ಎನ್. ಸಿಕ್ಕಿ ರೆಡ್ಡಿ ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.