ಬರ್ಮಿಂಗ್‌ಹ್ಯಾಮ್: ಭಾರತದ ಪ್ರತಿಭಾನ್ವಿತ ಶಟ್ಲರ್, ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ ಕ್ರೀಡಾಭಿಮಾನಿಗಳ ಲಕ್ಷ್ಯವನ್ನೆಲ್ಲ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೇಲೆ ಕೇಂದ್ರೀಕರಿಸುವಂತೆ ಮಾಡಿದ್ದಾರೆ. ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಅವರು ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಚೀನದ ಕ್ವಾರ್ಟರ್ ಫೈನಲ್ ಎದು ರಾಳಿ ಲು ಗುವಾಂಗ್ ಜು ಗಾಯಾಳಾದ ಕಾರಣ ಲಕ್ಷ್ಯ ಸೇನ್‌ಗೆ ವಾಕ್-ಓವರ್ ನೀಡಲಾಯಿತು. ಮಲೇಶ್ಯದ ಲೀ ಜೀ ಜಿಯ-ಜಪಾನಿನ ಕೆಂಟೊ ಮೊಮೊಟೊ ನಡುವಿನ ವಿಜೇತರನ್ನು ಲಕ್ಷ್ಯ ಸೇನ್ ಎದುರಿಸಲಿದ್ದಾರೆ.
ಲಕ್ಷ್ಯ ಸೇನ್ ದ್ವಿತೀಯ ಸುತ್ತಿನಲ್ಲಿ ವಿಶ್ವದ ನಂ.3 ಆಟಗಾರ, ಡೆನ್ಮಾರ್ಕ್ ನ ಆ್ಯಂಡರ್ ಆ್ಯಂಟನ್ಸೆನ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿ ಸಿದ್ದರು.
ತಿೃಷಾ-ಗಾಯತ್ರಿ ಜೋಡಿ ಗೆಲುವು :
ವನಿತಾ ಡಬಲ್ಸ್‌ನಲ್ಲಿ ತಿೃಷಾ ಜಾಲಿ-ಗಾಯತ್ರಿ ಗೋಪಿಚಂದ್ ಅಮೋಘ ಜಯದೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 46ರಷ್ಟು ಕೆಳಸ್ಥಾನದಲ್ಲಿರುವ ಇವರು ಕೊರಿಯಾದ ಲೀ ಸೋಹೀ-ಶಿನ್ ಸಿಯಾಂಗಾcನ್ ವಿರುದ್ಧ 14-21, 22-20, 21-15 ಅಂತರದ ಆಚ್ಚರಿಯ ಮೇಲುಗೈ ಸಾಧಿಸಿದರು