Advertisement

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ : ಪ್ರಶಸ್ತಿ ಸುತ್ತಿಗೆ ಲಕ್ಷ್ಯ ಸೇನ್‌ ಓಟ

10:50 PM Mar 19, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಭಾರತದ ಭರವಸೆಯ ಶಟ್ಲರ್‌ ಲಕ್ಷ್ಯ ಸೇನ್‌ ಐತಿಹಾಸಿಕ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಅವರು ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ.

Advertisement

ಶನಿವಾರ ನಡೆದ ತೀವ್ರ ಪೈಪೋಟಿಯ ಸೆಮಿಫೈನಲ್‌ನಲ್ಲಿ ಲಕ್ಷ್ಯ ಸೇನ್‌ ಹಾಲಿ ಚಾಂಪಿಯನ್‌, ಮಲೇಶ್ಯಾದ ಲೀ ಜೀ ಜಿಯಾ ಅವರನ್ನು 21-13, 12-21, 21-19 ಅಂತರದಿಂದ ಮಣಿಸಿದರು. ಲೀ ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನಿನ ಬಲಿಷ್ಠ ಆಟಗಾರ ಕೆಂಟೊ ಮೊಮೊಟ ಅವರನ್ನು 3 ಗೇಮ್‌ಗಳಲ್ಲಿ ಸೋಲಿಸಿ ಉಪಾಂತ್ಯ ತಲುಪಿದ್ದರು. ಆದರೆ ಇಲ್ಲಿ ಭಾರತೀಯನೆದುರು ಲೀ ಆಟ ನಡೆಯಲಿಲ್ಲ.

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಇತಿಹಾಸದಲ್ಲಿ ಈವರೆಗೆ ಕೇವಲ ಇಬ್ಬರು ಭಾರತೀಯರಷ್ಟೇ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. ಇವರೆಂದರೆ ಪ್ರಕಾಶ್‌ ಪಡುಕೋಣೆ ಮತ್ತು ಪುಲ್ಲೇಲ ಗೋಪಿಚಂದ್‌. ಇವರ ಸಾಲನ್ನು ಅಲಂಕರಿಸಿಸುವ ಚಿನ್ನದಂಥ ಅವಕಾಶವೊಂದು ಲಕ್ಷ್ಯ ಸೇನ್‌ ಮುಂದಿದೆ.

ಸೇನ್‌ ಮೊದಲ ಗೇಮ್‌ ಸುಲಭದಲ್ಲಿ ವಶಪಡಿಸಿಕೊಂಡರು. ದ್ವಿತೀಯ ಗೇಮ್‌ನಲ್ಲಿ ಸಂಪೂರ್ಣ ವೈಫ‌ಲ್ಯ ಅನುಭವಿಸಿದರು. ನಿರ್ಣಾಯಕ ಗೇಮ್‌ನಲ್ಲಿ ಹಿನ್ನಡೆಯಿಂದ ಪಾರಾಗಿ ಗೆಲುವಿನ ಬಾವುಟ ಹಾರಿಸುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next