Advertisement
ಮಂಗಳವಾರದ ಮೊದಲ ಸುತ್ತಿನ ಮುಖಾಮುಖಿಯಲ್ಲಿ ಜರ್ಮನಿಯ ವೋನ್ ಲೀ ಮೊದಲ ಗೇಮ್ ಬಳಿಕ ಹಿಂದೆ ಸರಿದ ಕಾರಣ ಸಿಂಧು ಮುನ್ನಡೆ ಸುಲಭಗೊಂಡಿತು. ಮೊದಲ ಗೇಮ್ 21-10 ಅಂಕಗಳಿಂದ ಸಿಂಧು ಪಾಲಾಗಿತ್ತು.ವಿಶ್ವದ 11ನೇ ರ್‍ಯಾಂಕಿಂಗ್ ಆಟಗಾರ್ತಿಯಾಗಿರುವ ಸಿಂಧು ದ್ವಿತೀಯ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಆ್ಯನ್ ಸೆ ಯಂಗ್ ವಿರುದ್ಧ ಆಡಲಿದ್ದಾರೆ.