Advertisement

Adani ಕಂಪೆನಿಯ ಎಲ್ಲ ವಿದ್ಯುತ್‌ ರಾಜ್ಯದ ಬಳಕೆಗೆ

12:45 AM Jan 11, 2024 | Team Udayavani |

ಉಡುಪಿ: ಬರಗಾಲದ ಹಿನ್ನೆಲೆಯಲ್ಲಿ ಈ ವರ್ಷ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್‌ ಬೇಕಿರುವ ಕಾರಣ ರಾಜ್ಯ ಸರಕಾರದ ಸೂಚನೆ ಮೇರೆಗೆ ಪಡುಬಿದ್ರಿಯ ಅದಾನಿ ವಿದ್ಯುತ್‌ ಕಂಪೆನಿಯೂ ಸಹ ತಾನು ಉತ್ಪಾದಿಸುವ ಸಂಪೂರ್ಣ ವಿದ್ಯುತ್‌ ಅನ್ನು ರಾಜ್ಯಕ್ಕೆ ಪೂರೈಸಲಿದೆ.

Advertisement

ಎರಡು ತಿಂಗಳ ಹಿಂದೆ ರಾಜ್ಯ ಸರಕಾರವು ವಿದ್ಯುತ್‌ ಕಾಯ್ದೆಯ ತುರ್ತು ಷರತ್ತು (ಸೆಕ್ಷನ್‌ 11) ಅನ್ವಯಿಸಿ ಬರಗಾಲದ ಕಾರಣ ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗುವ ಬಗ್ಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅದಾನಿ ಕಂಪೆನಿ ಪಂಜಾಬ್‌ ಗೆ ವಿದ್ಯುತ್‌ ಪೂರೈಸದಿರಲು ನಿರ್ಧರಿಸಿದೆ.

ಈ ಕಂಪೆನಿಯು ಎಲ್ಲೂರು ಗ್ರಾಮದಲ್ಲಿ ಒಟ್ಟು 1,200 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯದ 2 ಸ್ಥಾವರಗಳನ್ನು ಹೊಂದಿದೆ. ಒಪ್ಪಂದದ ಪ್ರಕಾರ ಕಂಪೆನಿಯು ಕರ್ನಾಟಕಕ್ಕೆ 1,015 ಮೆಗಾವ್ಯಾಟ್‌ ಮತ್ತು ಪಂಜಾಬ್‌ಗ 185 ಮೆಗಾವ್ಯಾಟ್‌ ಗಳನ್ನು ಪೂರೈಸುತ್ತಿದೆ.

ರಾಜ್ಯದಲ್ಲಿ ಮಳೆಯ ಕೊರತೆ ಹಿನ್ನೆಲೆಯಲ್ಲಿ ಜಲವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಕನಿಷ್ಠ ಮಟ್ಟದಲ್ಲಿದೆ. ಅದಾನಿ ಕಂಪೆನಿಯ ಹೆಚ್ಚುವರಿ ವಿದ್ಯುತ್‌ ಲಭ್ಯ ವಾದರೆ ವಿದ್ಯುತ್‌ ಕೊರತೆ ಸ್ವಲ್ಪ ಮಟ್ಟಿಗೆ ನೀಗಬಹುದು ಎನ್ನುತ್ತಾರೆ ಅಧಿಕಾರಿಯೊಬ್ಬರು.

ದರ ಎಷ್ಟು?
ಕಂಪೆನಿ ರಾಜ್ಯದ ಎಸ್ಕಾಂಗಳಿಗೆ ಪ್ರತೀ ಯೂನಿಟ್‌ಗೆ 5ರಿಂದ 6 ರೂ.ಗೆ ನೀಡುತ್ತಿದೆ. ಆದರೆ ಅತಿವೃಷ್ಟಿಯಿಂ ದಾಗಿ ಕಳೆದ ವರ್ಷ ರಾಜ್ಯವು ಇವರಿಂದ ವಿದ್ಯುತ್‌ ಸ್ವೀಕರಿಸಿರಲಿಲ್ಲ. ಹಾಗೆಯೇ ಪಂಜಾಬ್‌ಗ ಪ್ರತೀ ಯೂನಿಟ್‌ಗೆ 8 ರೂ. ವಿಧಿಸುತ್ತಿತ್ತು.

Advertisement

ಪ್ರಸ್ತುತ ಕಂಪೆನಿಯೂ ತನ್ನ ಸ್ಥಾವರದಲ್ಲಿ ವಿದ್ಯುತ್‌ ಉತ್ಪಾದಿಸಲು ಸಾಕಷ್ಟು ಕಲ್ಲಿದ್ದಲುಗಳನ್ನುದ ದಾಸ್ತಾನು ಇರಿಸಿದೆ. ಎಸ್ಕಾಂಗಳು ಈ ಹಿಂದಿನ ಬಾಕಿ ಸುಮಾರು 3 ಸಾವಿರ ಕೋ.ರೂ.ಗಳ ಪೈಕಿ ರಾಜ್ಯ ಸರಕಾರವು ಸುಮಾರು 1,350 ಕೋ.ರೂ.ಗಳನ್ನು ಪಾವತಿಸಿದೆ. ಉಳಿದ ಹಣವೂ ಶೀಘ್ರವೇ ಪಾವತಿಯಾಗುವ ಸಂಭವವಿದೆ.

ಸದ್ಯಕ್ಕೆ ವಿದ್ಯುತ್‌ ಕೊರತೆ ಈಗ ಇಲ್ಲ. ಸರ್‌ಪ್ಲಸ್‌ ಇದೆ. ಹೈಡ್ರೊ ಜನರೇಷನ್‌ ನಿರ್ವಹಣೆ ಹಿನ್ನಲೆಯಲ್ಲಿ ಜುಲೈ, ಆಗಸ್ಟ್ ತಿಂಗಳಿನಲ್ಲಿ ಕೊರತೆ ಇತ್ತು. ಸರಕಾರದ ಸೂಚನೆಯಂತೆ ಯುಪಿಸಿಎಲ್‌ ಈಗ ರಾಜ್ಯದೊಳಗೆ ವಿದ್ಯುತ್‌ ಪೂರೈಕೆ ಮಾಡುತ್ತಿದೆ. ಸೆಪ್ಟಂಬರ್‌ನಿಂದ ಇದುವರೆಗೆ ಸರ್‌ಪ್ಲಸ್‌ ನಲ್ಲಿದೆ. ಯಾವುದೇ ಸಮಸ್ಯೆ ಸದ್ಯಕ್ಕಿಲ್ಲ.
– ಪದ್ಮಾವತಿ, ಮೆಸ್ಕಾಂ ಎಂಡಿ

ಅದಾನಿ ಪವರ್‌ ಪ್ಲಾಂಟ್‌ ಉತ್ಪಾದಿಸುವ ವಿದ್ಯುತ್‌ ಅನ್ನು ರಾಜ್ಯದೊಳಗೆ ಪೂರೈಸುವ ಪ್ರಕ್ರಿಯೆ ಆರಂಭಗೊಂಡಿದೆ. ಸರಕಾರದ ಮುಂದಿನ ಆದೇಶದವರೆಗೆ ಇದು ಹೀಗೆಯೇ ಮುಂದುವರಿಯಲಿದೆ.
– ಕಿಶೋರ್‌ ಆಳ್ವ,
ಅಧ್ಯಕ್ಷರು, ಕಾರ್ಯನಿರ್ವಾಹಕ ನಿರ್ದೇಶಕರು, ಅದಾನಿ ಗ್ರೂಪ್‌

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next