Advertisement

ಎಲ್ಲ ವಲಯಗಳ ಅಭಿವೃದ್ಧಿ

11:45 AM May 04, 2018 | |

ಬೆಂಗಳೂರು: ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕನಾಗಿ ಎಲ್ಲ ವಲಯಗಳ ಅಭಿವೃದ್ಧಿಗೆ ಗಮನಹರಿಸಿದ್ದೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ತಿಳಿಸಿದ್ದಾರೆ. ಗುರುವಾರ ಕ್ಷೇತ್ರದ ವಿವಿಧೆಡೆ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ ಮತಯಾಚನೆ ನಡೆಸಿದರು. ಶೈಕ್ಷಣಿಕ ಸೌಲಭ್ಯಗಳಿಗೆ ಆದ್ಯತೆ ನೀಡಲಾಗಿದ್ದು ಜತೆಗೆ ರಸ್ತೆ ಅಭಿವೃದ್ಧಿಗೂ ಹೆಚ್ಚು ಗಮನಹರಿಸಲಾಗಿದೆ.

Advertisement

ಟೋಲ್‌ಗೇಟ್‌ನಿಂದ ದೀಪಾಂಜಲಿನಗರದವರೆಗೆ, ನಾಗರಭಾವಿ ಮುಖ್ಯರಸ್ತೆ, ನಾಗಡಿ ರಸ್ತೆ ಲೆಪ್ರೊಸಿ ಆಸ್ಪತ್ರೆಯಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ ವೈಟ್‌ ಟಾಪಿಂಗ್‌ ಕಾಮಗಾರಿ, 29,589 ಕುಟುಂಬಗಳಿಗೆ ಬಿಪಿಎಲ್‌ ಪಡಿತರ ಚೀಟಿ ವಿತರಣೆ, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಂಚಶೀಲನಗರ ಹಾಗೂ ಇತರೆ ಬಡಾವಣೆಗಳ ಖಾತಾ ಪ್ರಕ್ರಿಯೆಗೆ ಇದ್ದ ಎಲ್ಲ ಅಡೆತಡೆಗಳನ್ನು ನಿವಾರಿಸಿ ಜನರ ಬಹುದಿನಗಳ ಕನಸನ್ನು ನನಸು ಮಾಡಲಾಗಿದೆ ಎಂದರು.

ಅಲ್ಲದೆ ಗೋವಿಂದರಾಜನಗರ, ಕನಕನಗರ ಸೇರಿದಂತೆ ಎಲ್ಲ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದ ಸಾರ್ವಜನಿಕ ಸುರಕ್ಷತೆಗಾಗಿ 400 ಕ್ಕೂ ಹೆಚ್ಚು ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದ ಪ್ರಿಯಕೃಷ್ಣ, ಮತದಾರರ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಿದ್ದು ಮತ್ತೂಮ್ಮೆ ಆಶೀರ್ವಾದ ಮಾಡುವಂತೆ ಕೋರಿದರು.

ಕಾವೇರಿಪುರ, ಗೋವಿಂದರಾಜನಗರ, ಅಗ್ರಹಾರ ದಾಸರಹಳ್ಳಿ, ಡಾ.ರಾಜ್‌ಕುಮಾರ್‌ ವಾರ್ಡ್‌, ಮಾರೇನಹಳ್ಳಿ, ಮಾರುತಿಮಂದಿರ, ಮೂಡಲಪಾಳ್ಯ, ನಾಗರಭಾವಿ , ನಾಯಂಡಹಳ್ಳಿ ವಾರ್ಡ್‌ಗÙಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮುಖಂಡರು ಪ್ರಿಯಕೃಷ್ಣ ಪರ ಪ್ರಚಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next