ನವದೆಹಲಿ: ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ವಿಶೇಷ ಕೊಡುಗೆಯೊಂದನ್ನು ನೀಡಿದೆ. ರಿಲಯನ್ಸ್ ಜಿಯೋ ನೆಟ್ ವರ್ಕ್ ನಿಂದ 2021ರ ಜನವರಿ 1ರಿಂದ ದೇಶೀಯವಾಗಿ ಉಚಿತ ಧ್ವನಿ ಕರೆ(Voice call)ಯನ್ನು ಮಾಡಬಹುದು ಎಂದು ತಿಳಿಸಿದೆ.
ರಿಲಯನ್ಸ್ ಕಂಪನಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಈ ಮೊದಲು ಎಲ್ಲಾ ದೇಶೀಯ ಧ್ವನಿ ಕರೆ (Voice call)ಗಳಿಗೆ ಇಂಟರ್ ಕನೆಕ್ಟ್ ಯೂಸೇಜ್ (ಐಯುಸಿ) ಶುಲ್ಕ ಶುಕ್ರವಾರ(ಡಿಸೆಂಬರ್ 31, 2020)ದಿಂದ ಕೊನೆಗೊಳ್ಳಲಿದೆ ಎಂದು ಹೇಳಿದೆ.
ಆಫ್ ನೆಟ್ ದೇಶೀಯ ಧ್ವನಿ (voice call) ಕರೆಗಳ ಶುಲ್ಕವನ್ನು ಶೂನ್ಯಕ್ಕಿಳಿಸುವ ಬದ್ಧತೆಯನ್ನು ಗೌರವಿಸಿ ಐಯುಸಿ ಶುಲ್ಕವನ್ನು ರದ್ದುಗೊಳಿಸಿದೆ. ಆ ನಿಟ್ಟಿನಲ್ಲಿ ಜಿಯೋ 2021ರ ಜನವರಿ 1ರಿಂದ ಉಚಿತ ಧ್ವನಿ ಕರೆ ಮಾಡಬಹುದಾಗಿದೆ ಎಂದು ಜಿಯೋ ತಿಳಿಸಿದೆ. ಜಿಯೋ ನೆಟ್ವರ್ಕ್ ಬಳಸಿ ಉಚಿತ ಧ್ವನಿ ಕರೆ ಮಾಡಬಹುದಾಗಿದೆ.
ಇದನ್ನೂ ಓದಿ:ಬಾಂಗ್ಲಾದೇಶ ಪ್ರವಾಸಕ್ಕೆ ವಿಂಡೀಸ್ ಆಟಗಾರರ ಹಿಂದೇಟು! ಪ್ರಮುಖ ಆಟಗಾರರ ಗೈರು!
ಐಯುಸಿ ವ್ಯವಸ್ಥೆಯಿಂದಾಗಿ ಧ್ವನಿ ಕರೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಐಯುಸಿ ವ್ಯವಸ್ಥೆ ತೆಗೆದು ಹಾಕುವುದಾಗಿ ಕಂಪನಿ ಈ ಮೊದಲು ಘೋಷಿಸಿತ್ತು. ಈ ನಿಟ್ಟಿನಲ್ಲಿ ಜನವರಿ 1ರಿಂದ ಉಚಿತ ಧ್ವನಿ ಕರೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಂತಾಗಿದೆ.