Advertisement

BJP ಭದ್ರ ಕೋಟೆಗಳೆಲ್ಲ ಈಗ ಬದಲಾಗುತ್ತವೆ: ಶಿವರಾಜ್‌ಕುಮಾರ್

09:22 PM Mar 11, 2024 | Vishnudas Patil |

ದಾವಣಗೆರೆ: ದಾವಣಗೆರೆ, ಶಿವಮೊಗ್ಗ ಬಿಜೆಪಿಯ ಭದ್ರಕೋಟೆ ಎನ್ನುತ್ತಾರೆ. ಈಗ ಅದೆಲ್ಲ ಯಾವುದೂ ಇಲ್ಲ. ಭದ್ರ ಕೋಟೆಗಳಿದ್ದರೂ ಬದಲಾಗುತ್ತವೆ ಎನ್ನುವ ಮೂಲಕ ಚಿತ್ರನಟ ಡಾ| ಶಿವರಾಜ್‌ಕುಮಾರ್ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪತ್ನಿ ಗೀತಾ ಶಿವರಾಜ್‌ಕುಮಾರ್ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗೀತಾ ಶಿವರಾಜಕುಮಾರ್ ಅವರ ಚುನಾವಣೆ ಸಿದ್ಧತೆ ನಡೆದಿದೆ. ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಕುಟುಂಬಗಳ ಮಧ್ಯೆ ಚುನಾವಣೆ ನಡೆಯುತ್ತಿದೆ. ತಮ್ಮ ಪತ್ನಿ ಗೀತಾ ಶಿವರಾಜಕುಮಾರ್ ರೋಚಕ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವೂ ಇಲ್ಲ ಎಂದರು.

ಶಿವಮೊಗ್ಗದಲ್ಲೇ ಜನಿಸಿರುವ ಗೀತಾಗೆ ತವರು ಜಿಲ್ಲೆ. ಹಾಗಾಗಿ ಶಿವಮೊಗ್ಗಕ್ಕೆ ಹೋಗಿ, ಬರುತ್ತಿರುತ್ತಾರೆ. ಅವರ ತಂದೆಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದವರು. ಹಾಗಾಗಿ ಬಗ್ಗೆ ಸಾಕಷ್ಟು ಮಾಹಿತಿ, ಸಮಸ್ಯೆಗಳ ಬಗ್ಗೆಯೂ ಗೀತಾರಿಗೆ ಚೆನ್ನಾಗಿಯೇ ಗೊತ್ತಿದೆ ಎಂದು ತಿಳಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾರಿಗೆ ಕ್ಷೇತ್ರದ ಅಭಿಮಾನಿ ದೇವರುಗಳ ಆಶೀರ್ವಾದ ಇರಲಿ. ಗೀತಾ ಶಿವರಾಜ್‌ಕುಮಾರ ರಾಜಕಾರಣಿಗಳ ಕುಟುಂಬದಿಂದ ಬಂದವರು. ನಮ್ಮ ಕುಟುಂಬಕ್ಕೂ ಸಹ ರಾಜಕಾರಣ ಹೊರತಾ ಗಿಲ್ಲ. ನಮ್ಮ ತಂದೆಯವರಿದ್ದಾಗ ರಾಜಕಾರಣಿಗಳು ಮನೆಗೆ ಬರುತ್ತಿದ್ದರು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next