ಸೈದಾಪುರ: ಧರ್ಮದ ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕೃತಿಯನ್ನು ಕಲಿಸಿ, ಯಾರೂ ಧರ್ಮಾಚರಣೆಯಿಂದ ವಿಮುಖರಾಗಬಾರದು. ಬಡವ ಬಲ್ಲದರಾದಿಯಾಗಿ ಎಲ್ಲರಿಗೂ ದೇವನೊಬ್ಬನೇ, ದೇವರಲ್ಲಿ ಯಾವುದೇ ಬೇಧವಿಲ್ಲ. ಎಲ್ಲರೂ ಪರಮಾತ್ಮನ ಮಕ್ಕಳು ಎಂದು ಕಿಲ್ಲನಕೇರಾ ಮಠದ ಪೀಠಾಧಿಪತಿ ಚೆನ್ನವೀರ ಶಿವಾಚಾರ್ಯರು ಹೇಳಿದರು.
ಕಿಲ್ಲನಕೇರಾ ಗ್ರಾಮದಲ್ಲಿ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡ ತುಲಭಾರ ಹಾಗೂ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
40 ವರ್ಷಗಳ ಹಿಂದೆ ಕಿಲ್ಲನಕೇರಾದ ಚನ್ನವೀರೇಶ್ವರ ಮೂಲಮಠದ ಅಧಿಕಾರವನ್ನು ಕೇವಲ ಒಂದು ರುದ್ರಾಕ್ಷಿ ಮಾಲೆಯ ಮುಖಾಂತರ ಶಿವಯೋಗಿ ಸಿದ್ದರಾಮ ಗುರುಗಳು ಸರಳ ರೀತಿಯಲ್ಲಿ ಅಧಿಕಾರ ವಹಿಸಿಕೊಟ್ಟಿದ್ದರು. ಆ ದಿನ ಇಂದು ಚಿರಸ್ಮರಣೀಯವಾಗಿದೆ. ಇಲ್ಲಿಯವರೆಗೆ ನನ್ನ ಮೇಲೆ ಶಿಷ್ಯ ವರ್ಗದವರ ಪ್ರೀತಿ, ಅಭಿಮಾನ, ಭಕ್ತಿ ಪರಾಕಾಷ್ಠೆ ನನ್ನನ್ನು ಮಂತ್ರ ಮುಗ್ನನನ್ನಾಗಿಸಿದೆ ಎಂದರು.
ಇದನ್ನೂ ಓದಿ: ಫಸಲ್ ಬಿಮಾ ಯೋಜನೆ ಅನುಷ್ಠಾನ
ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಶರಣು.ಬಿ.ಗದ್ದುಗೆ ಮಾತನಾಡಿದರು. ಈ ಸಂದರ್ಭದಲ್ಲಿ ಶಹಾಪುರ ಚರಬಸವೇಶ್ವರ ಸಂಸ್ಥಾನ ಮಠದ ಬಸವಯ್ಯ ಶರಣರು, ಉತ್ತರ ಕರವೇ ಅಧ್ಯಕ್ಷ ಶರಣು.ಬಿ. ಗದ್ದುಗೆ, ವೀರಭಾರತಿ ಪ್ರತಿಷ್ಠಾನದ ಮುಖ್ಯಸ್ಥ ವೈಜನಾಥ ಹಿರೇಮಠ, ಹಾಸ್ಯ ಕಲಾವಿದ ಬಸವರಾಜ ಮಹಾಮನಿ, ಡಾ| ಜ್ಯೋತಿಲತಾ ತಡಿಬಿಡಿಮಠ, ಗಂಗಾಧರ ಹಿರೇಮಠ, ಭೂದಯ್ಯ ಜಿ. ಹಿರೇಮಠ, ಬಸವರಾಜ ವಿಶ್ವಕರ್ಮ, ಶರಣಗೌಡ ಚೇಗುಂಟ, ಬಸವರಾಜಸ್ವಾಮಿ, ರಾಜಶೇಖರಗೌಡ, ಮಲ್ಲಪ್ಪ ಗೌಡ, ಅಂಬರೀಶ್ ಗೌಡ, ಮಹೇಶ ಗೌಡ, ತೋಟಪ್ಪಯ್ಯ ಸ್ವಾಮಿ, ಶಿವಾನಂದಸ್ವಾಮಿ, ಚಂದ್ರಪ್ಪ ಧೋತ್ರೆ, ವಿರೂಪಾಕ್ಷ ಕೋರಿ, ಹಳ್ಳೆಪ್ಪ ಧೋತ್ರೆ, ದೇವಿಂದ್ರಪ್ಪ ಬಡಿಗೇರ, ಭೀಮರಾಯ ಧೋತ್ರೆ, ಚಂದ್ರಶೇಖರ ವಿಶ್ವಕರ್ಮ, ಸಾಬರೆಡ್ಡಿ ಉಪ್ಪಾರ, ಬಸವರಾಜ ಮಡಿವಾಳ, ಸಾಬಣ್ಣ ಬಾವುರ, ಬಸವರಾಜ ಸಜ್ಜನ ಇದ್ದರು.
ಚನ್ನವೀರ ಶ್ರೀಗಳು ಅಪಾರ ಪಾಂಡಿತ್ಯ ಹೊಂದಿದ ಸರಳ ವ್ಯಕ್ತಿಗಳಾಗಿದ್ದಾರೆ. ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ತುಲಭಾರ, ಪ್ರವಚನ, ಧರ್ಮಸಭೆ ಅತಿ ಶ್ರೇಷ್ಠವಾದ ಕಾರ್ಯವಾಗಿದೆ. ಇದೊಂದು ಸೇವಾ ಮನೋಭಾವನೆ ಕೆಲಸವಾಗಿದ್ದೂ ಗ್ರಾಮದ ಭಕ್ತರ ಸೇವೆ ಇತರರಿಗೆ ಮಾದರಿಯಾಗಲಿ.
-ಬಸವಯ್ಯ ಶರಣರು, ಚರಬಸವೇಶ್ವರ ಗದ್ದುಗೆ ಸಂಸ್ಥಾನ ಮಠ ಶಹಾಪುರ