Advertisement

ನಟಿ ಆಲಿಯಾ ಹುಟ್ಟುಹಬ್ಬಕ್ಕೆ ‘RRR’ ತಂಡದಿಂದ ವಿಶೇಷ ಉಡುಗೊರೆ  

02:47 PM Mar 15, 2021 | Team Udayavani |

ಹೈದರಾಬಾದ್ : ಬಾಲಿವುಡ್ ಬೆಡಗಿ ಆಲಿಯಾ ಭಟ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನವವಸಂತಕ್ಕೆ ಅಡಿಯಿಡುತ್ತಿರುವ ಈ ಚೆಲುವೆಗೆ ಆರ್‍ಆರ್‍ಆರ್‍ ಚಿತ್ರತಂಡ ಬರ್ತ್‍ಡೇ ಉಡುಗೊರೆಯೊಂದನ್ನು ನೀಡಿದೆ. ‘RRR’ ಚಿತ್ರದಲ್ಲಿಯ ಆಲಿಯಾ ಲುಕ್ ರಿಲೀಸ್ ಮಾಡಿದೆ.

Advertisement

ಬಾಹುಬಲಿ ಖ್ಯಾತಿಯ ಸ್ಟಾರ್ ನಿರ್ದೇಶಕ ಎಸ್‍.ಎಸ್‍.ರಾಜಮೌಳಿ ನಿರ್ದೇಶನದ ‘RRR’ ಚಿತ್ರದಲ್ಲಿ ಆಲಿಯಾ ಭಟ್, ಸೀತಾ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಆಲಿಯಾ ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ. ‘RRR’ ಚಿತ್ರದಲ್ಲಿ ಅಲ್ಲೂರಿ ಸೀತಾರಾಮ ಪಾತ್ರಧಾರಿ ರಾಮ್ ಚರಣ್ ಅವರಿಗೆ ನಾಯಕಿಯಾಗಿ ಈ ನಟಿ ಬಣ್ಣ ಹಚ್ಚಿದ್ದಾರೆ.

ಡಿವಿವಿ ದಾನಯ್ಯ ಅವರ ಕಾದಂಬರಿಯಾಧರಿತ ‘RRR’ ಚಿತ್ರ, ಭಾರತ ಸ್ವಾತಂತ್ರ್ಯ ಹೋರಾಟಗಾರರಾದ ಕುಮ್ರಾಮ್ ಭೀಮ್ ಹಾಗೂ ಅಲ್ಲುರಿ ಸೀತಾರಾಮ್ ರಾಜು ಅವರ ಕಥೆ ಹೊಂದಿದೆ. ತೆಲುಗು ನಾಯಕ ನಟ ರಾಮ್ ಚರಣ್ ಅವರು ಸೀತಾರಾಮ್ ರಾಜು ಹಾಗೂ ಜ್ಯೂನಿಯರ್ ಎನ್‍ಟಿಆರ್ ಅವರು ಕುಮ್ರಾಮ್ ಭೀಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನು ಬಹುತಾರಾಗಣದ ಈ ಸಿನಿಮಾದಲ್ಲಿ ಐರಿಶ್ ಬ್ಯೂಟಿ ಅಲಿಸನ್ ಡೂಡಿ, ಓಲಿವಿಯಾ ಮೊರಿಸ್,ಬಾಲಿವುಡ್ ನಟ ಅಜಯ್ ದೇವಗನ್, ಶರಿಯಾ ಶರಣ್, ನಟಿಸಿದ್ದಾರೆ. ಈಗಾಗಲೇ ಅರ್ಧಭಾಗ ಶೂಟಿಂಗ್ ಮುಗಿಸಿಕೊಂಡಿರುವ ‘RRR’ ಚಿತ್ರ 2021ರ ಅಕ್ಟೋಬರ್ 13ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next