Advertisement

Muslim ಮಹಿಳೆಯರಿಗೂ ಜೀವನಾಂಶ: ತೀರ್ಪಿಗೆ ಆಕ್ಷೇಪ

12:57 AM Jul 16, 2024 | Team Udayavani |

ಹೊಸದಿಲ್ಲಿ: ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶ ಕೇಳಬಹುದು ಎಂದು ಜು.10ರಂದು ಸುಪ್ರೀಂ ನೀಡಿದ್ದ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ಎಐಎಂಪಿಎಲ್‌ಬಿ (ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ) ನಿರ್ಧರಿಸಿದೆ. ತೆಲಂಗಾಣದ ಪ್ರಕರಣದಲ್ಲಿ ಸುಪ್ರೀಂ ಈ ತೀರ್ಪು ನೀಡಿತ್ತು. ಅದು ಶರಿಯಾ ಕಾನೂನಿಗೆ ವಿರುದ್ಧವೆಂದು ಮಂಡಳಿ ವಾದಿಸಿದೆ. ವಿಚ್ಛೇದನಗೊಂಡ ಬಳಿಕ 90 ದಿನಗಳ ವರೆಗೆ ಮಾತ್ರ ಮಹಿಳೆಯರು ಪರಿಹಾರ ಕೇಳಬಹುದು. ಬಳಿಕ ಮರು ವಿವಾಹವಾಗಬಹುದು. ಬಳಿಕ ಮೀರಿ ಪರಿಹಾರ ಕೇಳಿ ದರೆ ಸಲೀಸಾಗಿ ವಿಚ್ಛೇದನ ಪಡೆಯಲು ಸಾಧ್ಯವಿಲ್ಲವೆಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next