Advertisement

ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾಕ‌ ಸಂಸ್ಥೆ ಅಲ್ಲ

06:00 AM Jul 05, 2018 | |

ಲಕ್ನೋ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು ಅಲ್ಪಸಂಖ್ಯಾಕ ವಿಶ್ವವಿದ್ಯಾಲಯವಲ್ಲ ಎಂದು ಉತ್ತರ ಪ್ರದೇಶದ ಪ.ಜಾ. ಪ.ಪಂ ಆಯೋಗ ಹೇಳಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಏಕೆ ಮೀಸಲು ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದೆ. ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ಗಳು  ಈ ಹಿಂದೆ ನೀಡಿರುವ ತೀರ್ಪಿನ ಆಧಾರದಲ್ಲಿ ಅಲಿಗಡ ಮುಸ್ಲಿಂ ವಿವಿ ಅಲ್ಪಸಂಖ್ಯಾಕ ಸಂಸ್ಥೆಯಲ್ಲ ಎಂದು ಸಾಬೀತಾಗಿದೆ. ಹೀಗಾಗಿ ಈ ವಿವಿ ಕೂಡ ಮೀಸಲು ನೀಡಬೇಕು ಎಂದು ಆಯೋಗದ ಅಧ್ಯಕ್ಷ ಬ್ರಿಜ್‌ಲಾಲ್‌ ಹೇಳಿದ್ದಾರೆ. ಜತೆಗೆ ವಿವಿಗೆ ನೋಟಿಸ್‌ ನೀಡಲಾಗಿದೆ ಎಂದೂ ಹೇಳಿದ್ದಾರೆ.

Advertisement

ವಿವಿಯಲ್ಲಿ ಗಲಾಟೆ: ಇದೇ ವೇಳೆ ಲಕ್ನೋ ವಿವಿಯಲ್ಲಿ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಗದ್ದಲ ಉಂಟಾಗಿದೆ. ಈ ಸಂದರ್ಭದಲ್ಲಿ ಕೆಲ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದ ವರೆಗೆ ವಿವಿಯನ್ನು ಮುಚ್ಚಲು ನಿರ್ಧರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next