Advertisement

Alien: ನಮ್ಮ ನಡುವೆಯೇ ಅನ್ಯಗ್ರಹ ಜೀವಿಗಳ ವಾಸ: ಹೀಗೊಂದು ವರದಿ!

01:01 PM Jun 14, 2024 | Team Udayavani |

ನವದೆಹಲಿ: ಅನ್ಯಗ್ರಹ ಜೀವಿಗಳ ಬಗ್ಗೆ ಮನುಷ್ಯನಲ್ಲಿ ತೀರದ ಕುತೂಹಲವಿದೆ. ಈ ಬಗ್ಗೆ ಪಾಶ್ಚಾತ್ಯ ವಿಜ್ಞಾನಿಗಳು ನಿರಂತರವಾಗಿ ಹುಡುಕಾಡುತ್ತಲೇ ಇದ್ದಾರೆ. ಇದೀಗ ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಹಲವು ಊಹೆಗಳನ್ನು ಮಂಡಿಸಿದ್ದಾರೆ.

Advertisement

ಮಾನವ ವಿಕಾಸ ಕಾರ್ಯಕ್ರಮ (ಹ್ಯೂಮನ್‌ ಫ್ಲರಿಶಿಂಗ್‌ ಪ್ರೋಗ್ರಾಮ್‌)ದಡಿ ಹಲವು ಕುತೂಹಲಕರ ಸಾಧ್ಯತೆಗಳನ್ನು ಮಂಡಿಸಲಾಗಿದೆ. ಅನ್ಯಗ್ರಹ ಜೀವಿಗಳು ಮನುಷ್ಯನ ನಡುವೆಯೇ ವೇಷ ಮರೆಸಿಕೊಂಡು ಮನುಷ್ಯನಂತೆಯೇ ಬದುಕುತ್ತಿರಬಹುದು. ಇಲ್ಲವೇ ಭೂಗತವಾಗಿರಬಹುದು, ಚಂದ್ರಲೋಕದಲ್ಲೂ ಇರಬ ಹುದು ಎಂದು ಹೇಳಲಾಗಿದೆ. ತಮ್ಮ ಶೋಧ ಫ‌ಲಿತಾಂಶಗಳೆಲ್ಲ ಕೇವಲ ಊಹೆಗಳ ಆಧಾರದಲ್ಲಿ ರೂಪಿತಗೊಂಡಿರುವಂತವು ಎಂದು ವಿಜ್ಞಾನಿಗಳು ತಿರಸ್ಕರಿಸಬಹುದು. ಆದರೂ ಇವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಂಶೋಧಕರು ವಿನಂತಿ ಮಾಡಿದ್ದಾರೆ.

ಪುರಾತನ ಕಾಲದಲ್ಲಿ ಬಹಳ ಮುಂದುವರಿದು ಕಾಲಾಂತರದಲ್ಲಿ ನಾಶವಾಗಿರುವ ಜನಾಂಗಗಳು ಅಲ್ಪಪ್ರಮಾಣದಲ್ಲಿ, ಎಲ್ಲೋ ಒಂದು ಕಡೆ ಭೂಮಿಯಲ್ಲಿ ನಿಗೂಢವಾಗಿ ವಾಸಿಸುತ್ತಿರಬಹುದು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next