ನವದೆಹಲಿ: ಚೀನಾದ ದೈತ್ಯ ಅಲಿಬಾಬಾ ಸಂಸ್ಥೆ ತನ್ನ ಎಲ್ಲಾ ಷೇರುಗಳನ್ನು ಪೇ ಟಿಎಂಗೆ ಶುಕ್ರವಾರ (ಫೆಬ್ರವರಿ 10) ಮಾರಾಟ ಮಾಡಿದ್ದು, ಈ ವಹಿವಾಟಿನ ಮೂಲಕ ಅಲಿಬಾಬಾ ಸಂಸ್ಥೆ ಪೇ ಟಿಎಂನ ಮಾಲೀಕತ್ವವನ್ನು ಕಳೆದುಕೊಂಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮೊಹನ್‌ಲಾಲ್-ಅಕ್ಷಯ್ ಕುಮಾರ್ ಭಾಂಗ್ರಾ ಡ್ಯಾನ್ಸ್: ವಿಡಿಯೋ ವೈರಲ್
ಜನವರಿಯಲ್ಲಿ ಪೇಟಿಎಂ ಶೇ.6.261ರಷ್ಟು ಷೇರುಗಳಲ್ಲಿ ಸುಮಾರು ಶೇ.3.1ರಷ್ಟು ಮಾರಾಟ ಮಾಡಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಶುಕ್ರವಾರ ಪೇ ಟಿಎಂ ಷೇರುಗಳ ಮೌಲ್ಯ ಶೇ.8ರಷ್ಟು ಇಳಿಕೆ ಕಂಡಿದ್ದು, ಒಂದು ಷೇರಿನ ಬೆಲೆ 653.5 ರೂಪಾಯಿಯಷ್ಟಿತ್ತು. ಕಳೆದ ನಾಲ್ಕು ದಿನಗಳಿಂದ ಷೇರುಗಳ ಬೆಲೆ ಇಳಿಕೆಯಾಗುತ್ತಿತ್ತು. ಶುಕ್ರವಾರ ಬೆಳಗ್ಗೆ ಪೇ ಟಿಎಂ ಷೇರುಗಳ ಬೆಲೆ 650 ರೂ.ಗೆ ವಹಿವಾಟು ನಡೆದಿದ್ದರು, ಶೇ.7.93ರಷ್ಟು ನಷ್ಟ ಕಂಡಿತ್ತು ಎಂದು ವರದಿ ವಿವರಿಸಿದೆ.
ಅಲಿಬಾಬಾ ಈಗಾಗಲೇ ಜೊಮಾಟೊ ಮತ್ತು ಬಿಗ್ ಬಾಸ್ಕೆಟ್ ನ ಷೇರುಗಳನ್ನು ಮಾರಾಟ ಮಾಡಿತ್ತು. ಇತ್ತೀಚೆಗಿನ ಒಪ್ಪಂದದಂತೆ ಭಾರತದ ಮಾರುಕಟ್ಟೆಯಿಂದ ಬಹುತೇಕ ಅಲಿಬಾಬಾ ಸಂಸ್ಥೆ ಹೊರನಡೆದಂತಾಗಿದೆ ಎಂದು ವರದಿ ತಿಳಿಸಿದೆ.
ಚೀನಾ ಮೂಲದ ಅಲಿಬಾಬಾ ಸಂಸ್ಥೆ ಪೇ ಟಿಎಂ ಜತೆಗಿನ ಮಾಲೀಕತ್ವವನ್ನು ಕಳೆದುಕೊಂಡಿದೆ. ಈ ಸುದ್ದಿಯಿಂದಾಗಿ ಮಾರುಕಟ್ಟೆಯಲ್ಲಿ ಇನ್ನಷ್ಟು ಉತ್ತೇಜನ ದೊರಕಲಿದೆ ಎಂದು ವರದಿ ಹೇಳಿದೆ.
ಪ್ರಸಕ್ತ ಸಾಲಿನ 2023) ತ್ರೈಮಾಸಿಕ ವರದಿಯಲ್ಲಿ, ಕಳೆದ ಕೆಲವು ದಿನಗಳಿಂದ ಅಲಿಬಾಬಾ ಸಂಸ್ಥೆಯ ಷೇರುಗಳ ಮೌಲ್ಯ ಇಳಿಕೆ ಕಂಡಿತ್ತು. ಅದೇ ರೀತಿ ಪೇಟಿಎಂ ಷೇರುಗಳ ಮೌಲ್ಯ ಕೂಡಾ ಕುಸಿತ ಕಂಡಿತ್ತು.