Advertisement

ನೂರು ಕೋಟಿ ರೂ. ಬಾಚಿದ ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಥಿಯಾವಾಡಿ’

04:18 PM Mar 06, 2022 | Team Udayavani |

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಫೆಬ್ರವರಿ 25 ರಂದು ಬಿಡುಗಡೆಯಾದ ಚಿತ್ರವು ಈಗಾಗಲೇ ವಿಶ್ವದಾದ್ಯಂತ 100 ಕೋಟಿ ರೂ. ಬಾಚಿದೆ.

Advertisement

ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ವಿಶ್ವದಾದ್ಯಂತ 100 ಕೋಟಿ ರೂ.ಗಳ ಗಡಿ ದಾಟಿದೆ. ಚಿತ್ರವು ಎರಡನೇ ವಾರದಲ್ಲಿ ದಿ ಬ್ಯಾಟ್‌ಮ್ಯಾನ್ ಮತ್ತು ಜುಂಡ್‌ನಿಂದ ಸ್ಪರ್ಧೆ ಎದುರಿಸಿದರೂ ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ವಾರ್ನ್ ಕೋಣೆ ಮತ್ತು ಸ್ನಾನದ ಟವೆಲ್ ನಲ್ಲಿ ರಕ್ತದ ಕಲೆಗಳು ಪತ್ತೆ; ಥಾಯ್ಲೆಂಡ್ ಪೊಲೀಸರು

ಗಂಗೂಬಾಯಿ ಕಥಿಯಾವಾಡಿ ಚಿತ್ರವು ಹುಸೇನ್ ಜೈದಿ ಅವರ ಪುಸ್ತಕ, ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಅನ್ನು ಆಧರಿಸಿದೆ. ಆಲಿಯಾ ಭಟ್ ಜೊತೆಗೆ, ಚಿತ್ರದಲ್ಲಿ ಅಜಯ್ ದೇವಗನ್, ಪಾರ್ಥ್ ಸಮಥಾನ್, ಶಂತನು ಮಹೇಶ್ವರಿ ಮತ್ತು ಸೀಮಾ ಪಹ್ವಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next