Advertisement

ಅಲಿಯಾರ “ಗಂಗೂಬಾಯಿ ಕಥಿಯಾವಾಡಿ’ಚಿತ್ರದ ಬಿಡುಗಡೆ ಮುಂದೂಡಿಕೆ

08:32 PM Nov 15, 2021 | Team Udayavani |

ಹೈದರಾಬಾದ್:  ನಟಿ ಅಲಿಯಾ ಭಟ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ “ಗಂಗೂಬಾಯಿ ಕಥಿಯಾವಾಡಿ’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

Advertisement

ಬನ್ಸಾಲಿ ಪ್ರೊಡಕ್ಷನ್ಸ್ ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಗಂಗೂಬಾಯಿ ಕಥಿಯಾವಾಡಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

ಗಂಗೂಬಾಯಿ ಕಥಯಾವಾಡಿ ಏಳಿಗೆ, ಶಕ್ತಿ, ಧೈರ್ಯ ಮತ್ತು ನಿರ್ಭಯತೆ ಹೋರಾಟವನ್ನು ಮುಂದಿನ ವರ್ಷ ಫೆಬ್ರವರಿ 18ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಎಂದು ಅಭಿಮಾನಿಗಳಿಗೆ ಟ್ವೀಟ್​ ಮಾಡಿದ್ದಾರೆ.

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ಜ.7ರಂದು ಬಿಡುಗಡೆಯಾಗಲಿದ್ದು, ಅದರೊಂದಿಗೆ ಘರ್ಷಣೆಯಾಗದಿರಲಿ ಎಂಬ ಕಾರಣಕ್ಕಾಗಿ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

ಇದನ್ನೂ ಓದಿ:ವಾಕಿಂಗ್ ಹೋಗುತ್ತಿದ್ದಾಗ ನಟಿಗೆ ಹಲ್ಲೆ; ಮೊಬೈಲ್ ಕಿತ್ತುಕೊಂಡು ಪರಾರಿ

Advertisement

ಲೇಖಕ ಹುಸೇನ್‌ ಜೈದಿ ಬರೆದಿರುವ ನೈಜ ಘಟನೆ ಆಧರಿತ “ಮಾಫಿಯಾ ಕ್ವೀನ್ಸ್‌ ಆಫ್ ಮುಂಬೈ’ ಕಾದಂಬರಿ ಆಧರಿಸಿ ಈ ಚಿತ್ರ ತಯಾರಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next