ಪಣಜಿ: ಲೊಕೋಪಯೋಗಿ ಖಾತೆಯ ಸಚಿವ ನೀಲೇಶ್ ಕ್ಯಾಬ್ರಾಲ್ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ಬಿಜೆಪಿ ಶಾಸಕ ಅಲೆಕ್ಸೊ ಸಿಕ್ವೇರಾ ಅವರು ಪ್ರಮೋದ್ ಸಾವಂತ್ ನೇತೃತ್ವದ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
66 ವರ್ಷದ ಅಲೆಕ್ಸೊ ಸಿಕ್ವೇರಾ ರವರಿಗೆ ರಾಜಭವನದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಉಪಸ್ಥಿತಿಯಲ್ಲಿ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ಪ್ರಮಾಣ ವಚನ ಬೋಧಿಸಿದರು. ರಾಜ್ಯ ಲೋಕೋಪಯೋಗಿ ಇಲಾಖೆ, ಪರಿಸರ ಮತ್ತು ಕಾನೂನು ಮತ್ತು ನ್ಯಾಯಾಂಗ ಸೇರಿದಂತೆ ಖಾತೆಗಳನ್ನು ಹೊಂದಿದ್ದ ಕ್ಯಾಬ್ರಾಲ್ ಅವರು ಭಾನುವಾರ ರಾಜೀನಾಮೆ ನೀಡಿದ್ದರು. ಕಳೆದ ವರ್ಷ ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರ್ಪಡೆಯಾದ ಎಂಟು ಶಾಸಕರಲ್ಲಿ ಅಲೆಕ್ಸೊ ಸಿಕ್ವೇರಾ ರವರೂ ಒಬ್ಬರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಕ್ವೇರಾ, ತಾವು ಬಿಜೆಪಿ ಸೇರಿದಾಗ ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದರು, ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವುದು ಸಂತಸ ತಂದಿದ್ದು, ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ನಿರೀಕ್ಷೆಯಂತೆ, ನುವೆ ಶಾಸಕ ಅಲೆಕ್ಸ್ ಸಿಕ್ವೇರಾ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಈಡೇರಿಸಲು ಬಿಜೆಪಿ ಒಂದೂವರೆ ವರ್ಷಗಳ ನಂತರ ಲೋಕೋಪಯೋಗಿ ಸಚಿವ ನೀಲೇಶ್ ಕ್ಯಾಬ್ರಾಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ಇದರಿಂದಾಗಿ ಕಳೆದೆರಡು ದಿನಗಳಿಂದ ಆರಂಭವಾದ ರಾಜಕೀಯ ವಿದ್ಯಮಾನಗಳು ಸಂಪೂರ್ಣ ಸ್ಥಗಿತಗೊಂಡಿವೆ.
ಸಿಕ್ವೇರಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಿಕ್ವೇರಾ ಇಂಗ್ಲಿಷ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಿಕ್ವೇರಾ ಅವರು ವಿದ್ಯುತ್ ಮತ್ತು ಉದ್ಯಮ ಖಾತೆಗಳನ್ನು ಪಡೆಯುವ ಸಾಧ್ಯತೆಯಿದೆ. ಕಾಂಗ್ರೇಸ್‍ನಿಂದ ಬಿಜೆಪಿ ಪಕ್ಷ ಪ್ರವೇಶಿಸುವ ಸಂದರ್ಭದಲ್ಲೇ ಪಕ್ಷದ ಮುಖಂಡರು ನೀಡಿದ ಭರವಸೆಯನ್ನು ಬಿಜೆಪಿ ಈಡೇರಿಸಿದೆ. ಹೀಗಾಗಿ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆದರೂ ವಿಷಯ ಮುಂದಕ್ಕೆ ಹೋಗಲಿಲ್ಲ. ಈಗಲಾದರೂ ದಿಗಂಬರ ಕಾಮತ್ ಅವರು ಸಿಕ್ವೇರಾ ಸೇರ್ಪಡೆಗೆ ಒತ್ತಾಯಿಸಿದ್ದರಿಂದ ಇಡೀ ಪ್ರಕ್ರಿಯೆ ತುರ್ತಾಗಿ ನಡೆಯಬೇಕಿತ್ತು ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಅಲೆಕ್ಸ್ ಸಿಕ್ವೇರಾ ಅವರಿಗೆ ಯಾವ ಖಾತೆಗಳನ್ನು ಹಸ್ತಾಂತರಿಸಲಿದ್ದಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ. ಸುದಿನ್ ಧವಲಿಕರ್ ಮತ್ತು ಮಾವಿನ್ ಗುಡಿನ್ಹೋ ಕ್ರಮವಾಗಿ ವಿದ್ಯುತ್ ಮತ್ತು ಉದ್ಯೋಗ ಖಾತೆಗಳನ್ನು ಹೊಂದಿದ್ದಾರೆ. ಆ ಖಾತೆಗಳನ್ನು ಸಿಕ್ವೇರಾ ಅವರಿಗೆ ಹಸ್ತಾಂತರಿಸಲು, ಖಾತೆಗಳ ಮರು ಹಂಚಿಕೆ ಮಾಡಬೇಕಾಗಿದೆ. ಈ ಕುರಿತು ಮುಖ್ಯಮಂತ್ರಿಗಳನ್ನು ಕೇಳಿದಾಗ, ನಾವು ಒಂದು ಅಥವಾ ಎರಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡುತ್ತೇವೆ. ಕ್ಯಾಬ್ರಾಲ್ ಖಾತೆಗಳನ್ನು ಸಿಕ್ವೇರಾಗೆ ಹಸ್ತಾಂತರಿಸಲಾಗುವುದೇ? ಎಂದು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ನೋಡೋಣ ಎಂದು ಮುಖ್ಯಮಂತ್ರಿಗಳು ಉತ್ತರಿಸಿದರು.
ಇದನ್ನೂ ಓದಿ: Video: ಗಾಜಾ ಆಸ್ಪತ್ರೆಯೇ ಒತ್ತೆಯಾಳುಗಳ ಕೇಂದ್ರ… ವಿಡಿಯೋ ಬಿಡುಗಡೆಗೊಳಿಸಿದ ಇಸ್ರೇಲ್