ನಾಗ್ಪುರ: ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 450 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಅಲ್ಲದೆ ಅತೀ ವೇಗವಾಗಿ (ಪಂದ್ಯಗಳ ಲೆಕ್ಕಾಚಾರದಲ್ಲಿ) ಈ ಸಾಧನೆ ಮಾಡಿದ ಭಾರತೀಯ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
ಭಾರತೀಯ ಆಫ್-ಸ್ಪಿನ್ನರ್ ಈಗ ವೇಗವಾಗಿ 450ನೇ ಟೆಸ್ಟ್ ವಿಕೆಟ್‌ಗೆ ತಲುಪಿದ ವಿಶ್ವದ ಎರಡನೇ ಬೌಲರ್ ಆಗಿದ್ದಾರೆ. ರವಿ ಅಶ್ವಿನ್ ಅವರು 89ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದರೆ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ 80 ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ:‘ನಟ ಭಯಂಕರ’ನ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್; ಖುಷಿಯಲ್ಲಿ ಪ್ರಥಮ್
ಆಸೀಸ್ ಕೀಪರ್ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದ ವೇಳೆ ಅಶ್ವಿನ್ ಈ ದಾಖಲೆ ಪೂರ್ಣಗೊಳಿಸಿದರು. ಒಟ್ಟಾರೆ ಟೆಸ್ಟ್ ಕ್ರಿಕೆಟ್ ನಲ್ಲಿ 450 ವಿಕೆಟ್ ಪಡೆದ ವಿಶ್ವದ 9ನೇ ಬೌಲರ್ ಮತ್ತು ಎರಡನೇ ಭಾರತೀಯ ಎಂಬ ಸಾಧನೆ ಅಶ್ವಿನ್ ಅವರದ್ದು. ಅನಿಲ್ ಕುಂಬ್ಳೆ ಮೊದಲ ಭಾರತೀಯ.