Advertisement

ಮಾಧ್ಯಮ ಸರ್ಕಾರವನ್ನು ಎಚ್ಚರಿಸಲಿ

12:36 PM Oct 14, 2018 | Team Udayavani |

ಬೆಂಗಳೂರು: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ, ಯಾವತ್ತೂ ಪರಿಶುದ್ಧವಾಗಿರಬೇಕು. ಆಗ ಮಾತ್ರ ಜನರ ವಿಶ್ವಾಸರ್ಹತೆ ಉಳಿಸಿಕೊಳ್ಳಲು ಸಾಧ್ಯ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಎಚ್‌.ಎಂ.ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.

Advertisement

ಸಿದ್ದರಾಜು ಅಭಿನಂದನಾ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಆಧ್ಯಕ್ಷ ಎಂ.ಸಿದ್ದರಾಜು ಅವರ ಜೀವನ ಸಾಧನೆ ಕುರಿತ “ಸಿದ್ಧಹಸ್ತ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುವ ಪತ್ರಿಕಾರಂಗ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಬಡ ಕುಟುಂಬದಿಂದ ಬಂದ ಸಿದ್ದರಾಜು ಅವರು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಜನಪರ ಯೋಜನೆಗಳು ಜಾರಿಯಾಗುವಲ್ಲಿ ಸಿದ್ದರಾಜುರವರ ಪಾತ್ರ ಮಹತ್ವದಾಗಿದೆ ಎಂದು ಪ್ರಶಂಸಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌.ಕಾಂತರಾಜು ಮಾತನಾಡಿ, ಪತ್ರಿಕೋದ್ಯಮದ ಪದವಿ ಪಡೆಯದಿದ್ದರೂ ಆ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದು ಹೆಸರು ಮಾಡಿದ ಶ್ರೇಯಸ್ಸು ಸಿದ್ದರಾಜು ಅವರದ್ದಾಗಿದ್ದು, ಹಿಂದುಳಿದ ಜನಾಂಗದ ವಿದ್ಯಾರ್ಥಿಗಳಿಗೆ ಪ್ರೇರಣೆ ಮೂರ್ತಿಯಾಗಿದ್ದಾರೆ ಎಂದು ಶ್ಲಾ ಸಿದರು.

ಸಣ್ಣ ಸಮುದಾಯದಿಂದ ಬಂದ ಇವರು, ಅತಿ ಸಣ್ಣ ವಯಸ್ಸಿನಲ್ಲೇ ಪಿಟಿಐ ಸುದ್ದಿ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ, ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿದ್ದಾರೆ. ಸಾಧಿಸುವ ಛಲ, ಗುರಿ ಮತ್ತು ವಿನಯವಂತಿಕೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುವುದಕ್ಕೆ ಸಿದ್ದರಾಜು ಅವರು ಸಾಗಿಬಂದ ಹಾದಿ ಉತ್ತಮ ಉದಾಹರಣೆ ಎಂದು ಹೇಳಿದರು.

Advertisement

ಇದೇ ವೇಳೆ ಸಿದ್ಧರಾಜು ದಂಪತಿಗಳಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಹಿರಿಯ ಪತ್ರಕರ್ತ ಲಕ್ಷ್ಮಣ್‌ ಕೊಡಸೆ, ಡಾ.ಮೈ.ಸಿ.ಪಾಟೀಲ್‌, ಬೆಂಗಳೂರು ವಿಶ್ವವಿದ್ಯಾಲಯದ ಕುಲ ಸಚಿವ ಬಿ.ಕೆ.ರವಿ, ಲೋಕಸೇವಾ ಆಯೋಗದ ಸದಸ್ಯ ರವಿಕುಮಾರ್‌, ಉಪಕುಲಪತಿ ಕೆಂಪರಾಜು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next