Advertisement

ಆಲ್ದಾಳ-ಮೈಲಾರಪ್ಪ ಸಗರ ನಾಡಿನ ಚೇತನರು

08:25 PM Apr 26, 2021 | Team Udayavani |

ಸುರಪುರ : ನಾಟಕಕಾರ ರಂಗಕರ್ಮಿ ಎಲ್‌ಬಿಕೆ ಆಲ್ದಾಳರು ಭಾವೈಕ್ಯತೆ ಕೊಂಡಿಯಾಗಿದ್ದರು. ಬಾಲ್ಯದಿಂದಲೇ ಮಠದಲ್ಲಿಯೇ ಬೆಳೆದು ಆಧ್ಯಾತ್ಮಿಕತೆ ಮೈಗೂಡಿಸಿಕೊಂಡು ಶರಣರಾಗಿದ್ದರು. ಸಗರ ಮೈಲಾರಪ್ಪ ರೈತ ಚಳವಳಿಯಿಂದ ಪ್ರಸಿದ್ಧರಾಗಿದ್ದರು. ಇಬ್ಬರೂ ಸಗರ ನಾಡಿನ ಚೇತನಗಳು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದರು.

Advertisement

ನಗರದ ಗರುಡಾದ್ರಿ ಕಲಾಮಂದಿರದಲ್ಲಿ ತಾಲೂಕು ಕಸಾಪ ವತಿಯಿಂದ ಎಲ್‌ಬಿಕೆ ಆಲ್ದಾಳ, ಮೈಲಾರಪ್ಪ ಸಗರ ಅವರಿಗೆ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಾಟಕ ರಂಗವೇ ಅವರ ಬದುಕಾಗಿತ್ತು. ಅಂತೆಯೇ ಅವರಿಗೆ ಗುಬ್ಬಿ ವೀರಣ್ಣ, ರಾಜ್ಯೋತ್ಸವ, ಆಳ್ವಾಸ್‌ ನುಡಿಸಿರಿ ಹೀಗೆ ಅನೇಕ ಪ್ರಶಸ್ತಿ ಬಂದವು. ನೂರಾರು ನಾಟಕ, ಪುರಾಣ, ವಚನ ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದರು ಎಂದು ಸ್ಮರಿಸಿದರು. ಹೈಕೋರ್ಟ್‌ ವಕೀಲ ಜೆ. ಅಗಸ್ಟಿನ್‌, ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿದರು.

ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ನ್ಯಾಯವಾದಿ ನಿಂಗಣ್ಣಚಿಂಚೋಡಿ, ಕವಿಗಳಾದ ನಬೀಲಾಲ ಮಕಾನದಾರ, ಬೀರಣ್ಣ ಆಲ್ದಾಳ, ಎಚ್‌. ರಾಠೊಡ, ಕನಕಪ್ಪ ವಾಗನ ಗೇರಿ, ಪಂಡಿತ ನಿಂಬೂರೆ, ಶ್ರೀಹರಿರಾವ್‌ ಆದೋನಿ, ಸೋಮರೆಡ್ಡಿ ಮಂಗಿಹಾಳ, ಕುತುಬುದ್ಧೀನ್‌ ಅಮ್ಮಾಪುರ, ಯಲ್ಲಪ್ಪ ಹುಲಕಲ್ಲ, ಗೋಪಣ್ಣ ಯಾದವ, ಅನ್ವರ್‌ ಜಮಾದಾರ, ಶಾಂತರಾಜ ಬಾರಿ, ಎ. ಕಮಲಾಕರ, ಜಾವೇದ ಹವಲ್ದಾರ, ವೆಂಕಟೇಶ ಪಾಟೀಲ ರಾಘವೇಂದ್ರ ಭಕ್ರಿ ಇದ್ದರು. ದೇವು ಹೆಬ್ಟಾಳ ನಿರೂಪಿಸಿದರು. ರಾಜಶೇಖರ ದೇಸಾಯಿ ಸ್ವಾಗತಿಸಿದರು. ಶ್ರೀಶೈಲ ಯಂಕಂಚಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next