Advertisement
ಗ್ರಾಮದ ಶಾಧಿ ಮಹಲ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕುಷ್ಟಗಿ ಹಾಗೂ ದೋಟಿಹಾಳ ವಲಯದಿಂದ ಆಯೋಜಿಸಿದ್ದ 1623ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಇಡೀ ಕುಟುಂಬವನ್ನು ಬೆಳಗಿಸಿದ ಈ ಮದ್ಯವರ್ಜನ ಶಿಬಿರವು ಸಮಾಜಕ್ಕೆ ಮಾದರಿ ಮತ್ತು ಆದರ್ಶಪ್ರಾಯವಾಗಿದೆ ಎಂದು ಅವರು ಆಶೀರ್ವಚನ ನೀಡಿದರು.
Related Articles
Advertisement
ಶಿಬಿರಾಧಿಕಾರಿ ದಿವಾಕರ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಕುಡುಕನೆಂಬ ಒಂದೇ ಕಾರಣಕ್ಕೆ ನನ್ನ ಹೆಂಡತಿ ಮತ್ತು ಮಕ್ಕಳು ನನ್ನನ್ನು ತ್ಯಜಿಸಿ ತವರು ಸೇರಿದರು. ಕೈಯಲ್ಲಿ ಬಿಡಿಗಾಸು ಇಲ್ಲದ್ದಿದ್ದ ಸಂದರ್ಭ ಅವರಿವರಲ್ಲಿ ಕಾಡಿ ಬೇಡಿ ಹಣ ಪಡೆದು ಕುಡಿದು, ದಾರಿಯಲ್ಲಿ ಬಿದ್ದು ತಲೆಗೆಲ್ಲಾ ಪೆಟ್ಟು ಮಾಡಿಕ್ಕೊಂಡಿದ್ದೇನೆ ಎಂದು ಈ ಶಿಬಿರದಲ್ಲಿ ಭಾಗವಹಿಸಿದ 58 ಶಿಬಿರಾರ್ಥಿಗಳು ತಮ್ಮ ತಮ್ಮ ನೋವುಗಳನ್ನು ಹೇಳಿಕೊಂಡು, ಮದ್ಯವ್ಯಸನವನ್ನು ತ್ಯಜಿಸುವುದಾಗಿ ಪ್ರಮಾಣ ಮಾಡಿದ್ದಾರೆ. ಈ ಶಿಬಿರವು 8 ದಿನಗಳ ನಡೆದು ಇಂದು ಮುಕ್ತಾಯ ಕಂಡಿತು ಎಂದು ಹೇಳಿದರು.
ಇಲಕಲ್ ನಗರದ ಉಪನ್ಯಾಸಕ ಲಾಲಹುಸೇನ ಕಂದಗಲ್ ಅವರ ಕಾರ್ಯಕ್ರಮದ ಉಪನ್ಯಾಸ ನೀಡಿದರು. ಪ್ರಧಾನ ಸಂಚಾಲಕ ಸದಾನಂದ ಬಂಗೇರ, ತಾಲೂಕು ಯೋಜನಾಧಿಕಾರಿ ಶೇಖರ ನಾಯ್ಕ ಮಾತನಾಡಿದರು.
ಇದೇ ವೇಳೆ ಶಿಬಿರಾರ್ಥಿಗಳಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಶಿಬಿರವನ್ನು ಯಶಸ್ವಿಯಾಗಿ ನಿರ್ವಹಿಸಲು ಕಾರಣೀಕರ್ತರಾದ ದಾನಿಗಳಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೇಸೂರ ಗ್ರಾ.ಪಂ. ಸದಸ್ಯ ಗೌಸುಸಾಬ ಕೊಣ್ಣೂರು, ಶುಕಮುನಿ ಈಳಗೇರ, ಮಾಜಿ ಗ್ರಾ.ಪಂ. ಅಧ್ಯಕ್ಷ ಶೇಖಪ್ಪ ದೊಡಮನಿ, ಶರಣಪ್ಪ ಗೋತಗಿ, ಮಹಾಂತಯ್ಯ, ರುದ್ರಪ್ಪ ಅಕ್ಕಿ, ಮಾದೇಸ್ವಾಮಿ, ಅನ್ನಪೂರ್ಣ ಪಾಟೀಲ್, ಗ್ರಾಮದ ಮುಖಂಡರಾದ ಹನುಮಂತರಾವ್ ದೇಸಾಯಿ, ಬಾಳಪ್ಪ ಅರಳಿಕಟ್ಟಿ, ಶ್ಯಾಮೀದಸಾಬ ಮುಜಾವರ, ತಿಪ್ಪನಗೌಡ, ಕರಿಯಪ್ಪ ಪೂಜಾರಿ, ರಾಜೇಸಾಬ ತಾಸೇಧ, ಶ್ರೀನಿವಾಸ ಕಂಟ್ಲಿ, ಪ್ರೌಢಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಈರಪ್ಪ ಬಳಿಗಾರ, ದೋಟಿಹಾಳ ವಲಯದ ಮೇಲ್ವಿಚಾರಕ ಮಂಜುನಾಥ, ಸಂಘದ ಪದಾಧಿಕಾರಿಗಳು, ಸ್ವಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಶಿಬಿರಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಭಾಗವಹಿಸಿದರು.