Advertisement

“ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನೂ ಅಳವಡಿಸಿಕೊಳ್ಳಿ’

03:24 PM Feb 26, 2017 | Team Udayavani |

ಬಡಗನ್ನೂರು :  ಶಿಕ್ಷಣದ ಒಟ್ಟಿಗೆ ಮೌಲ್ಯಾಧಾರಿತ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌  ಇದರ ಕಾರ್ಯದರ್ಶಿ ವಿದ್ಯಾಗೌರಿ ಕರೆ ನೀಡಿದರು.

Advertisement

ಪಟ್ಟೆ ಶ್ರೀ ಕೃಷ್ಣ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಇದರ‌ ಸಂಸ್ಥಾಪಕ  ಲಾರ್ಡ್‌ ಬೇಡನ್‌ ಪೊವೆಲ್‌ ಅವರ ಜನ್ಮ ದಿನಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಸ್ಕೌಟ್ಸ್‌ ಮತ್ತು ಗೈಡ್ಸ್‌  ಪೂರಕವಾಗಿದೆ. ಮಕ್ಕಳು ಶಿಸ್ತು ಮತ್ತು  ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಈ ಮೂಲಕ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಶುಭ ಹಾರೈಸಿದರು. 

ಕಾರ್ಯಕ್ರಮವು ವಿದ್ಯಾಸಂಸ್ಥೆಯ ಅಧ್ಯಕ್ಷ ವೇಣುಗೋಪಾಲ ಭಟ್‌ ಪಿ. ಅಧ್ಯಕ್ಷತೆಯಲ್ಲಿ  ನಡೆಯಿತು.

ಕಾಲೇಜಿನ ಸಂಚಾಲಕ ಶರೀಷ್‌ ಪಿ.ಬಿ. ಧ್ವಜಾರೋಹಣ ಮಾಡಿದರು. ಬಳಿಕ  ವ್ಯಾಯಾಮ ಮತ್ತು ಸರ್ವಧರ್ಮ ಪ್ರಾರ್ಥನೆ ನಡೆಯಿತು. ಅನಂತರ  ಶ್ರೀ ದೇಯಿಬೈದೆತಿ ಔಷಧಿ ವನ  ವೀಕ್ಷಣೆ ನಡೆಯಿತು.

Advertisement

ಅನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ   ಕಾಲೇಜಿನ ಪ್ರಾಚಾರ್ಯೆ  ನವ್ಯತಾ ರೈ,  ಪಾಪೆಮಜಲು ಗೈಡ್‌ ಶಿಕ್ಷಕಿ ಮೇಬಲ್‌, ಬೆಥೆನಿ  ಪ್ರೌಢ ಶಾಲಾ ಶಿಕ್ಷಕಿ ಮೈತ್ರೇಯಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ   ವಿವೇಕಾನಂದ ಆಂಗ್ಲ ಮಾಧ್ಯಮ, ಪ್ರೌಢ ಶಾಲೆ, ಬೆಥೆನಿ  ಪ್ರೌಢ ಶಾಲೆ, ರಾಮಕೃಷ್ಣ  ಪ್ರೌಢ ಶಾಲೆ,  ಪಾಪೆಮುಜಲು ಸರಕಾರಿ ಪ್ರೌಢ ಶಾಲೆ,  ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಹೀಗೆ ಒಟ್ಟು 5 ಶಾಲೆಯ 106 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದರು.

ಪುತ್ತೂರು ರಾಮಕೃಷ್ಣ  ಪ್ರೌಢ ಶಾಲಾ ಎ.ಎಲ….ಟಿ.ಸಿ. ತರಬೇತುದಾರ ಶಿಕ್ಷಕಿ ಸುನೀತಾ ಅವರು ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ  ಶಾಲಾ ಮುಖ್ಯ ಶಿಕ್ಷಕಿ ಶಂಕರಿ ಸ್ವಾಗತಿಸಿದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ  ಸುಮನಾ ವಂದಿಸಿದರು.  ಶಾಲಾ ಗೈಡ್‌ ಶಿಕ್ಷಕ ಗೋಪಾಲಕೃಷ್ಣ ಭಟ್‌ ಕಾರ್ಯಕ್ರಮ ನಿರೂಪಣೆ ಮಾಡಿದರು ಸಭೆಯಲ್ಲಿ  ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಾಪಕಕರು, ವಿದ್ಯಾರ್ಥಿಗಳು ಕಾರ್ಯ ಕ್ರಮದಲ್ಲಿ  ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next