Advertisement

ಆಲಂಕಾರಿಗೆ ಮತ್ತೆ ಆಗಮಿಸಿತು 108 ವಾಹನ 

11:54 AM Aug 11, 2018 | Team Udayavani |

ಆಲಂಕಾರು : ಕಳೆದ 24 ದಿನಗಳಿಂದ ಕಾಣೆಯಾಗಿದ್ದ ಆಲಂಕಾರಿನ ಆರೋಗ್ಯ ರಕ್ಷಾ ವಾಹನ 108 ಗುರುವಾರ ಸಂಜೆ ವೇಳೆಗೆ ಆಲಂಕಾರಿಗೆ ಮತ್ತೆ ಮರಳಿ ಬಂದು ತನ್ನ ಉಚಿತ ಸೇವೆಯನ್ನು ನೀಡಲು ಆರಂಭಿಸಿದೆ. ಆಲಂಕಾರಿನಲ್ಲಿದ್ದ 108 ದುರಸ್ತಿಯ ನೆಪದಲ್ಲಿ ಕಳೆದ 24 ದಿನಗಳಿಂದ ನಿಗೂಢವಾಗಿ ಕಾಣೆಯಾಗಿತ್ತು. ಪರಿಣಾಮವಾಗಿ ಜನತೆ ತುರ್ತು ಚಿಕಿತ್ಸೆಗಳಿಗಾಗಿ ಖಾಸಗಿ ವಾಹನಗಳಿಗೆ ದುಂಬಾಲು ಬೀಳುವ ಅನಿವಾರ್ಯತೆ ಬಂದಿತ್ತು. ಆಲಂಕಾರಿನ 108ನ್ನು ಮತ್ತೆ ಕರೆತರುವುದಕ್ಕಾಗಿ ಪ್ರತಿಭಟನೆಗೂ ಸಿದ್ಧತೆ ನಡೆಯುತ್ತಿತ್ತು. ಈ ಕುರಿತು ಉದಯವಾಣಿ ಸುದಿನ ವಿಸ್ಕೃತ ವರದಿಯನ್ನು ಬುಧವಾರ ಪ್ರಕಟಿಸಿತ್ತು.

Advertisement

ಈ ವಿಚಾರ ಆರೋಗ್ಯ ರಕ್ಷಾದ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದು, ಆಲಂಕಾರಿನ 108 ವಾಹನದ ಸಿಬಂದಿಗಳಿಗೆ ದೂರವಾಣಿ ಕರೆ ಮಾಡಿತ್ತು. ಬುಧವಾರವೇ ಬಂದು ವಾಹನವನ್ನು ಪಡೆದು ಗುರುವಾರ ಫಿಟ್‌ನೆಸ್‌ ಪರೀಕ್ಷೆಗೆ ಸಾರಿಗೆ ಕಚೇರಿಗೆ ತೆರಳಿ ಗುರುವಾರ ಸಂಜೆಯೊಳಗೆ ಆಲಂಕಾರಿನಲ್ಲಿ ಸೇವೆಗೆ ತಯಾರಿರಬೇಕು ಎಂದು ಸೂಚನೆ ನೀಡಿದ್ದರು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಫಿಟ್‌ನೆಸ್‌ ಸರ್ಟಿಫಿಕೆಟ್‌ ಪಡೆದು ಗುರುವಾರ ಸಂಜೆ ವೇಳೆಗೆ ಸೇವೆಗೆ ಹಾಜರಾಗಿದೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

 ಶೀಘ್ರ ನೇಮಕ
ಆಲಂಕಾರಿನ 108 ಆರೋಗ್ಯ ಕವಚಕ್ಕೆ ಸಿಬಂದಿ ಕೊರತೆಯಿದೆ. ಇಲ್ಲಿಗೆ ನಾಲ್ಕು ಜನ ಸಿಬಂದಿಗಳ ಅವಶ್ಯಕತೆಯಿದ್ದು, ಸಂಸ್ಥೆಯು ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದಿ, ಉತ್ತಮ ಹಾಗೂ ತ್ವರಿತ ಸೇವೆಯನ್ನು ನೀಡುವ ಉದ್ದೇಶದಿಂದ ಆಯಾ ಜಿಲ್ಲೆಯ ಸಿಬಂದಿಗಳನ್ನೇ ನೇಮಿಸಿಕೊಳ್ಳಲು ನಿರ್ಧರಿಸಿದೆ. ಮೂರು ತಿಂಗಳೊಳಗೆ ಸಿಬಂದಿ ಸೇವೆಗೆ ಲಭ್ಯವಾಗಲಿದ್ದಾರೆ.
 - ಮಹಾಬಲ ಜಿಲ್ಲಾ ಉಸ್ತವಾರಿಗಳು,
    ಆರೋಗ್ಯ ರಕ್ಷಾ, ಮಂಗಳೂರು ವಿಭಾಗ 

Advertisement

Udayavani is now on Telegram. Click here to join our channel and stay updated with the latest news.

Next