Advertisement
ಪುರಸಭೆ ಪರಿಸರ ಅಭಿಯಂತರ ರವಿಕಾಂತ ಮಿಸ್ಕಿನ್ ಹಾಗೂ ಎಸ್‌ಐ ರಾಘವೇಂದ್ರ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸಹಾಯದೊಂದಿಗೆ ಪೌರ ಸಿಬ್ಬಂದಿ ಸ್ಥಳೀಯ ತಹಶೀಲ್ದಾರ್ ಹಾಗೂ ಪುರಸಭೆ ಕಚೇರಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ 35 ಜನರಿಗೆ ತಲಾ 200 ರೂಪಾಯಿ ದಂಡ ವಿಧಿಸಿದರು. ಅಭಿಯಂತರ ರವಿಕಾಂತ ಮಿಸ್ಕಿನ್ ಮಾತನಾಡಿ, ಕೋವಿಡ್-19 ಹರಡದಂತೆ ಸುರಕ್ಷಾ ಕ್ರಮ ಅನುಸರಿಸಿ ಓಡಾಡುವಂತೆ ಹಲವಾರು ಬಾರಿ ಧ್ವನಿಮುದ್ರಣ ಮೂಲಕ ನಾಗರಿಕರಲ್ಲಿ ಜಾಗೃತಿ ಕೈಗೊಳ್ಳಲಾಗಿದ್ದರೂ ಸಾರ್ವಜನಿಕರು ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಎಸ್‌ಐ ರಾಘವೇಂದ್ರ ಹಾಗೂ ಕಚೇರಿಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು. Advertisement
ಮಾಸ್ಕ್ ಧರಿಸದ 35 ಜನರಿಗೆ ದಂಡ
11:59 AM Jul 08, 2020 | Naveen |
Advertisement
Udayavani is now on Telegram. Click here to join our channel and stay updated with the latest news.