ಆಳಂದ: ತಾಲೂಕಿನ 1,31,131 ಕ್ಷೇತ್ರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲು ರೈತರ ಸಜ್ಜುಗೊಂಡಿದ್ದು, ಅಗತ್ಯ ಬೀಜಗಳ ವಿತರಣೆಗಾಗಿ ಕೃಷಿ ಇಲಾಖೆಯಿಂದ ಸಿದ್ಧತೆ ಸಾಗಿದೆ.
ಸಕಾಲಕ್ಕೆ ಜೂನ್ ಮೊದಲು ವಾರದಲ್ಲಿ ಮಳೆಯಾದರೆ ಭರದಿಂದ ಬಿತ್ತನೆ ಶುರುವಾಗಲಿದೆ. ಆದರೆ ಇಲಾಖೆಯಿಂದ ನೀಡುವ ರಿಯಾಯಿತಿ ಬೀಜಗಳ ವಿತರಣೆ ಕಾರ್ಯ ಆರಂಭಗೊಂಡಿಲ್ಲ. ಇದರಿಂದ ರೈತರಿಗೆ ಬೀಜಗಳತ್ತ ಎದುರು ನೋಡುವಂತಾಗಿದೆ. ಈ ಬಾರಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗಾಗಿ ಕೃಷಿ ಇಲಾಖೆ ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ದಾಸ್ತಾನು ಕೈಗೊಳ್ಳಲಾಗಿದ್ದು. ಬೀಜ ವಿತರಣೆಯಲ್ಲಿ ಕೋವಿಡ್-19 ಹರಡದಂತೆ ದಟ್ಟಣೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ 132 ಹಳ್ಳಿಗೆ ಸಂಬಂಧಿಸಿದ ಆಳಂದ, ನರೋಣಾ, ಮಾದನಹಿಪ್ಪರಗಾ, ನಿಂಬರಗಾ, ಖಜೂರಿ ಈ 5 ರೈತ ಸಂಪರ್ಕಗಳು ಸಾಲದಕ್ಕೆ ಆಯಾ ವಲಯದ 21 ಹಳ್ಳಿಗಳಲ್ಲಿ ಬೀಜ ವಿತರಣಾ ಕೇಂದ್ರ ಸ್ಥಾಪಿಸಲಾಗಿದೆ.
ಆಳಂದ ರೈತ ಸಂಪರ್ಕ ವ್ಯಾಪ್ತಿಯ ಜಿಡಗಾ, ತಡಕಲ್, ಪಡಸಾವಳಿ, ಮುನ್ನೋಳ್ಳಿ, ನರೋಣಾ ವಲಯದ ನರೋಣಾ, ವಿ.ಕೆ.ಸಲಗರ, ಚಿಂಚನಸೂರ, ಕಮಲಾನಗರ, ಮಾದನಹಿಪ್ಪರಗಾ, ನಿಂಬಾಳ, ಸರಸಂಬಾ, ಮೋಘಾ ಕೆ. ಹಾಗೂ ನಿಂಬರಗಾ ವಲಯದ ನಿಂಬರಗಾ, ಕಡಗಂಚಿ, ಮಾಡಿಯಾಳ, ಭೂಸನೂರ, ಖಜೂರಿ ವಲಯದ ಖಜೂರಿ, ನಿರಗುಡಿ, ರುದ್ರವಾಡಿ, ಕಿಣ್ಣಿಸುಲ್ತಾನ ಹೀಗೆ 21 ಹಳ್ಳಿಗಳಲ್ಲಿ ರಿಯಾಯಿತಿ ಬೀಜ ವಿತರಿಸಲಿದೆ. ಸಂಬಂಧಿ ತ ರೈತರು ತಮ್ಮ ವ್ಯಾಪ್ತಿಯ ಕೇಂದ್ರಕ್ಕೆ ಅಗತ್ಯ ದಾಖಲೆ ಸಲ್ಲಿಸಿ ಬೀಜ ಪಡೆಯಬೇಕು ಎಂದು ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ ತಿಳಿಸಿದ್ದಾರೆ.
2020 ಜನವರಿಯಿಂದ ಇದುವರೆಗೂ 71 ಮಿಮೀ ಬದಲು 95 ಮಿಮೀ ಮಳೆಯಾಗಿದೆ. ಸೋಯಾಬಿನ, ತೊಗರಿ, ಹೆಸರು, ಉದ್ದು, ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ ಬೀಜ ಲಭ್ಯವಿದ್ದು, ಸಾಮಾನ್ಯ ವರ್ಗಕ್ಕೆ ಶೇ. 50 ರಷ್ಟು ಹಾಗೂ ಎಸ್ಸಿ, ಎಸ್ಟಿ ಜನರಿಗೆ ಶೇ. 75ರಷ್ಟು ರಿಯಾಯಿತಿ ದರದಲ್ಲಿ ಬೀಜಗಳು ಜೂ. 4ರಂದು ವಿತರಿಸಲಾಗುವುದು.
ಶರಣಗೌಡ ಪಾಟೀಲ,
ಸಹಾಯಕ ಕೃಷಿ ನಿರ್ದೇಶಕರು, ಆಳಂದ
ಮಹಾದೇವ ವಡಗಾಂವ