Advertisement

ಮುಂಗಾರು ಬಿತ್ತನೆಗೆ ಅನುಕೂಲ ಕಲ್ಪಿಸಿ: ಸುಗೂರ

12:03 PM May 10, 2020 | Naveen |

ಆಳಂದ: ಕೋವಿಡ್‌-19 ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಮುಂಗಾರು ಹಂಗಾಮಿನ ಬಿತ್ತನೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ ಹೇಳಿದರು.

Advertisement

ತಾ.ಪಂ ಕಚೇರಿಯಲ್ಲಿ ನಡೆದ ಕೃಷಿ ಇಲಾಖೆ ಅಧಿಕಾರಿಗಳು, ಕ್ರಿಮಿನಾಶಕ, ಗೊಬ್ಬರ ವ್ಯಾಪಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಗೊಬ್ಬರ ಮಾರಾಟ ವ್ಯಾಪಾರಿಗಳು ಸುರಕ್ಷಾ ಕ್ರಮ ಅಳವಡಿಸಿ, ದಟ್ಟಣೆ ಆಗದಂತೆ ರೈತರಿಗೆ ತಿಳಿಹೇಳಿ ಸಕಾಲಕ್ಕೆ ಬೀಜ ಮತ್ತು ಗೊಬ್ಬರ ಮಾರಾಟ ಮಾಡಬೇಕು. ಲಾಕ್‌ ಡೌನ್‌ ನಿಯಮ ಉಲ್ಲಂಘಿಸಿದರೆ ಅದಕ್ಕೆ ವ್ಯಾಪಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದರು.

ವ್ಯಾಪಾರಿಗಳು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಗ್ರಾಹಕರ ಕೈ ಉಜ್ಜಿಕೊಳ್ಳಲು ಸ್ಯಾನಿಟೈಸರ್‌ ಇಡಬೇಕು. ರೈತರಿಗೂ ಮಾಸ್ಕ್ಧ ರಿಸಿಕೊಂಡು ಬರುವಂತೆ ತಿಳಿಸಬೇಕು ಎಂದು ಹೇಳಿದರು. ತಹಶೀಲ್ದಾರ್‌ ದಯಾನಂದ ಪಾಟೀಲ ಮಾತನಾಡಿ, ಬಿತ್ತನೆ ಸೇರಿದಂತೆ ಕೃಷಿ ಕಾರ್ಯಕ್ಕೆ ಯಾವುದೇ ಅಡ್ಡಿಪಡಿಸುವಂತಿಲ್ಲ ಎಂದರು. ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಮಾತನಾಡಿ, ಕೋವಿಡ್ ವೈರಸ್‌ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಐದು ಹೋಬಳಿ ಒಳಗೊಂಡು ಆಯಾ ಹೋಬಳಿ ಮಟ್ಟದಲ್ಲಿ ಸೇರಿ 21 ಕಡೆ ಬೀಜ ವಿತರಣಾ ಕೇಂದ್ರ ತೆರೆಯಲಾಗುತ್ತಿದೆ ಎಂದು ತಿಳಿಸಿದರು.

ನರೋಣಾ ಕೃಷಿ ಅಧಿಕಾರಿ ಬಸವರಾಜ ಅಟ್ಟೂರ, ನಿಂಬರಗಾ ಅಪ್ಪಾಸಾಬ್‌ ಜಗಶೆಟ್ಟಿ, ಮಾದನಹಿಪ್ಪರಗಾದ ವೀರೇಶ ಮಠಪತಿ, ಆಳಂದನ ಸರೋಜನಿ ಅಂಕಲಗಿ, ಖಜೂರಿಯ ಬಿ.ಎಂ. ಬಿರಾದಾರ ಹಾಗೂ ಖಾಸಗಿ ಬೀಜ, ರಸಗೊಬ್ಬರ ವ್ಯಾಪಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next