ಆಳಂದ: ಗ್ರಾಮೀಣ ಭಾಗದ ರೈತರಿಗೆ ಸೌಹಾರ್ದ ಸಹಕಾರಿ ಸಂಘಗಳಿಂದ ಸಕಾಲಕ್ಕೆ ಆರ್ಥಿಕ ನೆರವು ದೊರೆಯುತ್ತದೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.
ತಾಲೂಕಿನ ಪಡಸಾವಳಿ ಗ್ರಾಮದಲ್ಲಿ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ 3ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು,ಪಡಸಾವಳಿ ಗ್ರಾಮದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು. ಆದರೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಸಕಾಲಕ್ಕೆ ಸೌಹಾರ್ದ ಸಹಕಾರಿಗಳು ಕಡಿಮೆ ದರದಲ್ಲಿ ಸಾಲ ನೀಡುತ್ತಿವೆ. ಅನೇಕ ಕಡೆ ಇಂತಹ ಶಾಖೆಗಳು ವಿಫಲವಾಗಿವೆ. ಆದರೆ ಸರಸಂಬಾ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರವು ಕಳೆದ 18 ವರ್ಷಗಳಿಂದ ಯಶಸ್ವಿಯಾಗಿ ಬೆಳೆದು ಪಡಸಾವಳಿಯಲ್ಲಿ 3ನೇ ಶಾಖೆ ತೆರೆದು ಉತ್ತಮ ಶಾಖೆಯಾಗಿ, ಆಳಂದದಲ್ಲೂ ಶಾಖೆ ಆರಂಭಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಕಲಬುರಗಿ, ಯಾದಗಿರಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಎಸ್. ವಾಲಿ ಮಾತನಾಡಿ, ರಾಜ್ಯದ ಅನೇಕ ನರಗರಗಳಿಂದ ಗ್ರಾಮೀಣ ಭಾಗಕ್ಕೆ ಸೌಹಾರ್ದ ಶಾಖೆಗಳು ಅಷ್ಟೊಂದು ಯಶಸ್ವಿಯಾಗಿಲ್ಲ. ಆದರೆ ಗ್ರಾಮೀಣ ಭಾಗದಿಂದ ಸರಸಂಬಾ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರವು ಸ್ಥಾಪಿಸಿದ ಸಂಸ್ಥಾಪಕ ಅಧ್ಯಕ್ಷ ಮಹಾಂತಪ್ಪ ಆಲೂರೆ ಅವರು ಯಶಸ್ವಿಯಾಗಿ ಸೌಹಾರ್ದಕೂಟವನ್ನು ಮುನ್ನಡೆಸಿ ರೈತರಿಗೆ ಇನ್ನುಳಿದ ಬ್ಯಾಂಕ್ ಹಾಗೂ ಪತ್ತಿನ ಸಂಘಗಳಿಗಿಂತ ಕಡಿಮೆ ದರದಲ್ಲಿ ಸಾಲ ನೀಡಿ ಪಡಸಾವಳಿಯಲ್ಲಿ 3ನೇ ಶಾಖೆ ಆರಂಭಿಸಿ, ನಗರ ಪಟ್ಟಣಗಳಲ್ಲಿ ಶಾಖೆ ಆರಂಭಿಸಿಲು ಮುಂದಾಗಿರುವ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಬಸವರಾಜೇಂದ್ರ ಸ್ವಾಮೀಜಿ, ರಾಜ್ಯ ಸಯುಂಕ್ತ ಸಹಕಾರಿ ಸಂಘದ ನಿರ್ದೇಶಕ ಸಂಜೀವ ಮಹಾಜನ್, ಡಿಸಿಸಿ ನಿರ್ದೇಶಕ ಅಶೋಕ ಸಾವಳೇಶ್ವರ, ಉಪನ್ಯಾಸಕ ಅರುಣಕುಮಾರ ಪಾಟೀಲ, ಸಹಕಾರಿ ವಿಭಾಗದ ಪ್ರಾಂತಿಯ ವ್ಯವಸ್ಥಾಪಕ ರಾಜಶೇಖರ ಹೂಗಾರ ಮಾತನಾಡಿದರು.
ಶ್ರೀ ಧನಲಕ್ಷ್ಮೀ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಮಹಾಂತಪ್ಪ ಆಲೂರೆ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಎಚ್. ಮುನ್ನೋಳಿ, ಮಲ್ಲಣ್ಣಾ ನಾಗೂರೆ, ಶರಣಬಸಪ್ಪ ಬಿರಾದಾರ ಮಟಕಿ, ಡಾ| ಶರಣಬಸಪ್ಪ ಮಲಶೆಟ್ಟಿ, ಆಡಳಿತ ಮಂಡಳಿ ಉಪಾಧ್ಯಕ್ಷ ಸೂರ್ಯಕಾಂತ ಪಾಟೀಲ, ಸೋಲಿಂಗ ಎಸ್.ಕವಲಗಿ, ಕುಪೇಂದ್ರ ವಿ. ಪಾಟೀಲ, ಶ್ರೀಕಾಂತ ಬಿ. ದೇಶಟ್ಟಿ, ಪರಮೇಶ್ವರ ಮುನ್ನೋಳ್ಳಿ, ಸಿದ್ಧರಾಮ ಎಸ್. ಸೊಸೈಟಿ, ಹಣಮಂತ ಹೋಟಕರ್, ಸಂಜುಬಾಯಿ ಮೈಂದರಗಿ, ದೀಪಾ ಮಡ್ಯಾಳೆ, ಕವಿತಾ ಹಿರೇಮಠ, ವಿಜಯಲಕ್ಷ್ಮೀ ಕೊರಳ್ಳಿ, ವಿಜಯನಂದ ಕೆ. ಮಾಶಾಳೆ, ಮಲ್ಲಿನಾಥ ಗೋವಿನ ಮತ್ತು ಸೋಮನಾಥ ನಿಂಬರಗಿ ಹಾಜರಿದ್ದರು.