Advertisement
20 ಕ್ವಿಂಟಲ್ ತೊಗರಿ ಖರೀದಿಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬೀಳದೇ ಇರುವುದರಿಂದ ರೈತ ಸಹಕಾರಿ ಸಂಘಗಳು ಗೊಂದಲದಲ್ಲಿವೆ. ಭರವಸೆ ಈಡೇರಿಕೆಗೆ ಅಡ್ಡಿ ಏನು: ಫೆ.7ರಂದು 20 ಕ್ವಿಂಟಲ್ ತೊಗರಿ ಖರೀದಿ ಮಾಡುವ ಕುರಿತು ಮುಖ್ಯಮಂತ್ರಿಗಳು ಘೋಷಿಸಿದ್ದರು. ಅಲ್ಲದೇ ಅದೇ ದಿನ ಆದೇಶ ಹೊರಡಿಸುವುದಾಗಿ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರ 17 ಡಿಸೆಂಬರ್ 2019ರಂದು 5800 ರೂ. ಎಂ.ಎಸ್.ಪಿ ದರದಲ್ಲಿ ಒಂದು ಲಕ್ಷ 85 ಸಾವಿರ ಮ್ಯಾಟ್ರಿಕ್ ಟನ್ ಬೇಳೆ ಕಾಳು ಖರೀದಿ ಮಾಡಬೇಕು ಎಂಬ ಆದೇಶಿಸಿದೆ. ಹೆಚ್ಚುವರಿ ಖರೀದಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವೊಲಿಸಿ ಮರು ಆದೇಶಕ್ಕೆ ಒತ್ತಾಯಿಸಬೇಕಾಗಿದೆ.
ಹೊಂದಿರುವುದೇ ತೊಗರಿ ಖರೀದಿಗೆ ಅಡ್ಡಿಯಾಗಿದೆ ಎನ್ನಲಾಗಿದೆ. ಕಾರಣ ಕೇಂದ್ರ ಸರ್ಕಾರ ಬಫರ್ ಸ್ಟಾಕ್‌ನಿಂದ ಬೇಳೆಕಾಳುಗಳು ಖರೀದಿ ಮಾಡಬೇಕು ಎಂದು ರಾಜ್ಯಗಳಿಗೆ ಒತ್ತಾಯ ಮಾಡುತ್ತಿದೆ ಎಂಬುದು ರೈತ ಮುಖಂಡರ ವಾದವಾಗಿದೆ. ಪ್ರಸಕ್ತ ವರ್ಷದಲ್ಲಿ ತೊಗರಿ ಕೇಂದ್ರಗಳಲ್ಲಿ ಸುಮಾರು ಮೂರು ಲಕ್ಷ ರೈತರು ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಒಬ್ಬರಿಂದ 20 ಕ್ವಿಂಟಲ್ ಎಂದರೆ ಆರು ಲಕ್ಷ ಮೆಟ್ರಿಕ್ ಟನ್ ಖರೀದಿಸಬೇಕಾಗುತ್ತದೆ. ಈ ಅಂದಾಜಿನ ಪ್ರಕಾರ 3600 ಕೋಟಿ ರೂ. ಬೇಕಾಗುತ್ತದೆ. ಸದ್ಯ ರಾಜ್ಯದಲ್ಲಿ 1.85 ಲಕ್ಷ ಮೆಟ್ರಿಕ್ ಟನ್‌ಗೆ ಕೇಂದ್ರ ಸರ್ಕಾರ ಹಣ ನೀಡುತ್ತದೆ. 20 ಕ್ವಿಂಟಲ್ ಖರೀದಿಸಿದರೆ ದ್ವಿಗುಣವಾಗಿ ಸುಮಾರು ಎರಡುವರೆ ಸಾವಿರ ಕೋಟಿ ರೂ. ನೀಡಬೇಕಾಗುತ್ತದೆ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ರಾಜ್ಯ ಅಥವಾ ಕೇಂದ್ರ ಎರಡೂ ಸರ್ಕಾರಗಳು ಸೇರಿ ಭರಿಸಬೇಕೋ ಅಥವಾ ರಾಜ್ಯವೇ ಈ ಹಣ ಹೊಂದಿಸಿ ನೀಡಬೇಕೋ ಎನ್ನುವುದು ಇತ್ಯರ್ಥವಾಗಿದೆ ಉಳಿದಿದೆ. ಇದರಿಂದ ಖರೀದಿ ಮತ್ತು ಮಾರಾಟದಲ್ಲಿ ಅನುಮಾನ ಉಂಟಾಗಿದೆ.
Related Articles
ಕೇಂದ್ರಕ್ಕೆ ಮುಖ್ಯಮಂತ್ರಿಗಳು ಈ ಕುರಿತು ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ 20 ಕ್ವಿಂಟಲ್ ತೊಗರಿ ಖರೀದಿಗೆ ಒಪ್ಪಿಗೆ ನೀಡಿದರೆ ಮಾತ್ರ ಖರೀದಿಸಲಾಗುವುದು ಎನ್ನಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಜನವರಿ ಮೊದಲ ವಾರದಲ್ಲಿ ತೊಗರಿ ಖರೀದಿ ಆರಂಭಿಸಲಾಗಿತ್ತು. ಈ ವರ್ಷ ಫೆ.11ಕ್ಕೆ ಖರೀದಿ ಆರಂಭವಾಗಿದೆ.
Advertisement
ನೋಂದಣಿಗೆ ಪರದಾಡಿದ ರೈತ: ಬೆಳೆ ದರ್ಶಕ, ಭೂಮಿ ಫ್ರೂಟ್ಸ್ ಹಾಗೂ ಎನ್‌ಐ ಆ್ಯಪ್‌ಗ್ಳ ಮೂಲಕ ಸರ್ಕಾರ ರೈತರಿಂದ ತೊಗರಿ ಖರೀದಿ ಮಾಡುತ್ತಿದೆ. ಬೆಳೆ ದರ್ಶಕ ಆ್ಯಪ್‌ನಲ್ಲಿ ತೊಗರಿ ಬಿತ್ತಿದ ಹೊಲದಲ್ಲಿ ಜೋಳ, ಹತ್ತಿ ಇನ್ನಿತರ ಬೆಳೆ ತೋರಿಸುತ್ತಿದೆ. ಜಿಲ್ಲೆಯಲ್ಲಿ ಸುಮಾರು25 ಸಾವಿರ ಎಕರೆಯಲ್ಲಿ ತೊಗರಿ ಬಿತ್ತಿದ ರೈತರನ್ನು ನೋಂದಣಿ ಮಾಡಿಕೊಳ್ಳಲು ನಿರಾಕರಿಸಲಾಗಿದೆ. ಈ ಬಗ್ಗೆ ರಾಜ್ಯದ ಕೃಷಿ ಮಾರುಕಟ್ಟೆ ಸಚಿವರಿಗೆ ಈ ಭಾಗದ ರೈತ ಮುಖಂಡರು ಸಂಬಂಧಿ ತ ಸಚಿವರು, ಅಧಿಕಾರಿಗಳ ಗಮನಕ್ಕೆ ತಂದರೂ ನೋಂದಣಿ ಸಮಸ್ಯೆ ಇತ್ಯರ್ಥಗೊಳ್ಳದೆ ಇರುವುದು ತೊಗರಿ ಬೆಳೆದವರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.