Advertisement

ಬೆಳಮಗಿಯಲ್ಲಿ ಮಳೆ ಬಾರದಿದ್ರೂ ಹರಿಯಿತು ನೀರು!

04:34 PM Jun 28, 2019 | Team Udayavani |

ಆಳಂದ: ತಾಲೂಕಿನಾದ್ಯಂತ ಮಳೆಯ ಸಮರ್ಪಕ ನಿರೀಕ್ಷೆಯಲ್ಲಿ ಮುಂಗಾರು ಹಂಗಾಮಿಗಾಗಿ ರೈತರು ಅಲ್ಲಲ್ಲಿ ಬಿತ್ತನೆಗೆ ಚಾಲನೆ ನೀಡಿದ್ದಾರೆ.

Advertisement

ಕಳೆದ ಸಾಲಿನಲ್ಲಿ ಸಮಪರ್ಕ ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ರೈತ ಸಮುದಾಯ ಅನಿವಾರ್ಯವಾಗಿ ಪ್ರಸಕ್ತ ಹಂಗಾಮಿನ ಬಿತ್ತನೆಗೆ ಮುಂದಾಗಿದೆ. ಆದರೆ ಬಹುತೇಕರ ಕೈಯಲ್ಲಿ ಕಾಸಿಲ್ಲ. ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದಲಾದರೂ ದೊರೆಯುತ್ತಿದ್ದ ಬೆಳೆ ಸಾಲವೂ ಈ ಬಾರಿ ದೊರಕಿಲ್ಲ.

ಸಾಹುಕಾರಿ ಸಾಲ ತೆಗೆದುಕೊಂಡು ಬೀಜ, ಗೊಬ್ಬರ ಖರೀದಿಸಲು ರೈತ ಸಂಪರ್ಕ ಕೇಂದ್ರಗಳಿಗೆ ಹೋದರೆ, ಅವರು ಸಮಗ್ರ ದಾಖಲೆ ಕೇಳುತ್ತಿದ್ದಾರೆ. ದಾಖಲೆ ಸಂಗ್ರಹಿಸಿ ಮತ್ತೇ ಕಚೇರಿಗೆ ಹೋದರೆ ಬೀಜ ಖಾಲಿಯಾಗಿವೆೆ. ನಾಳೆ ಬರುತ್ತವೆ ಎನ್ನುತ್ತಾರೆ ಸಿಬ್ಬಂದಿ. ಹೀಗಾಗಿ ರೈತ ಸಮುದಾಯ ಬರಿಗೈಯಿಂದಲೇ ಓಡಾಡುವಂತ ಪರಿಸ್ಥಿತಿ ಎದುರಾಗಿದೆ.

ಈ ನಡುವೆ ಬೀಜ, ಗೊಬ್ಬರ ಖರೀದಿಸಿದ ರೈತರಿಗೆ ನಿರೀಕ್ಷಿತ ಮಳೆ ಅಗತ್ಯವಾಗಿದ್ದರೂ, ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯೊಂದಿಗೆ ಬಿತ್ತನೆಗೆ ಮುಂದಾಗಿದ್ದಾರೆ.

ಬಿತ್ತನೆ ಕ್ಷೇತ್ರ: ತಾಲೂಕಿನ ಐದು ಹೋಬಳಿಗೆ ಸಂಬಂಧಿಸಿ ಒಟ್ಟು 131131 ಹೆಕ್ಟೇರ್‌ ಪ್ರದೇಶದಲ್ಲಿ 595760 ಮೇಟ್ರಿಕ್‌ ಟನ್‌ ಉತ್ಪಾದನೆ ಗುರಿ ಹೊಂದಲಾಗಿದೆ. ಈ ಪೈಕಿ ತೃಣಧಾನ್ಯಗಳು: ಬಿತ್ತನೆ ಹೆಕ್ಟೇರ್‌ ಮತ್ತು ಮ್ಯಾಟ್ರಿಕ್‌ ಟನ್‌ ಉತ್ಪಾದನೆ ಗುರಿ ಹೊಂದಲಾಗಿದೆ. ಒಟ್ಟು ತೃಣಧಾನ್ಯ 3665 ಹೆಕ್ಟೇರ್‌ನಲ್ಲಿ 8247.5 ಮ್ಯಾಟ್ರಿಕ್‌ ಟನ್‌ ಉತ್ಪಾದನೆ ಗುರಿ ಹೊಂದಲಾಗಿದೆ.

Advertisement

ಐದು ಹೋಬಳಿ ಕೇಂದ್ರದಲ್ಲಿ ಒಟ್ಟು ಬೇಳೆ ಕಾಳುಗಳನ್ನು 107000 ಹೆಕ್ಟೇರ್‌ ಬಿತ್ತನೆ ಪ್ರದೇಶದಲ್ಲಿ 118416 ಮೆಟ್ರಿಕ್‌ ಟನ್‌ ಉತ್ಪಾದಿಸುವ ಗುರಿಯಿದೆ.

ಎಣ್ಣೆ ಕಾಳು: ಒಟ್ಟು ಎಣ್ಣೆಕಾಳು 14635 ಹೆಕ್ಟೇರ್‌ನಲ್ಲಿ 22416 ಟನ್‌ ಉತ್ಪಾದನೆ ಗುರಿಯಿದೆ. ವಾಣಿಜ್ಯ ಬೆಳೆ: ಹೀಗೆ ಒಟ್ಟು ವಾಣಿಜ್ಯ ಬೆಳೆಗಳು 5831 ಹೆಕ್ಟೇರ್‌ ಪೈಕಿ 446680 ಮೆಟ್ರಿಕ್‌ ಟನ್‌ ಉತ್ಪಾದನೆ ಗುರಿಹೊಂದಲಾಗಿದೆ. ಒಟ್ಟು ಮುಂಗಾರು ವಿಸ್ತೀರ್ಣ 131131 ಹೆಕ್ಟೇರ್‌ 595760 ಉತ್ಪಾದನೆ ಗುರಿಯಿದ್ದು, ಇದರಲ್ಲಿ ಒಟ್ಟು ಆಹಾರ ಬೆಳೆಗಳ ವಿಸ್ತೀರ್ಣ ಕ್ಷೇತ್ರ 110665 ಹೆಕ್ಟೇರ್‌ ಪೈಕಿ 1266635 ಮೆಟ್ರಿಕ್‌ ಟನ್‌ ಉತ್ಪಾದನೆ ಗುರಿಹೊಂದಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯಿಲ್ಲದಿದ್ದರೂ ಹರಿದ ನೀರು: ಜಿ.ಪಂ ಅಧ್ಯಕ್ಷೆ ಸುವರ್ಣ ಮಲಾಜಿ ಅವರ ಸ್ವಗ್ರಾಮ ಬೆಳಮಗಿ ಮತ್ತು ನೆರೆಯ ಸನಗುಂದಾ ಗ್ರಾಮಕ್ಕೆ ಮಳೆಯಾಗಿಲ್ಲ. ಆದರೂ ಬೆಳಮಗಿ ಮೇಲ್ಭಾಗದ ಅಟ್ಟೂರ, ಬಟಗೇರಾ ವಲಯದಲ್ಲಿ ಮಳೆಯಾಗಿದ್ದರಿಂದ ಬೆಳಮಗಿ ಹಳ್ಳಕ್ಕೆ ನೀರು ಹರಿದು ಬಂದಿದೆ ಎಂದು ಗ್ರಾಮದ ಧನರಾಜ ಮುರುಡ್‌ ತಿಳಿಸಿದ್ದಾರೆ. ಮಳೆಯಿಲ್ಲದ ಈ ಎರಡು ಗ್ರಾಮದಲ್ಲಿ ಬಿತ್ತನೆಗೆ ಮುಂದಾಗಿಲ್ಲ ಎಂದು ತಿಳಿಸಿದ್ದಾರೆ.

ಸೀರವಾಡಿ, ತಂಬಾಕವಾಡಿಯಲ್ಲಿ ಮಳೆ ಯಿಲ್ಲದ್ದಕ್ಕೆ ಬಿತ್ತನೆಯಿಲ್ಲ. ತಡಕಲ್, ಮುನ್ನೋಳಿ ಅರ್ಧ ಭಾಗದಲ್ಲಿ ಮಳೆಯಾಗಿದ್ದು, ಇನ್ನರ್ಧ ಭಾಗದಲ್ಲಿ ಆಗಿಲ್ಲ ಎಂದು ತಂಬಾಕವಾಡಿ ರೈತ ಚಂದ್ರಕಾಂತ ಬಿರಾದಾರ ತಿಳಿಸಿದ್ದಾರೆ.

ಆಳಂದ ತಾಲೂಕಿನಲ್ಲಿ ಏಳು ಮಳೆಪಾಪನ ಕೇಂದ್ರಗಳಿವೆ. ಮುಂಗಾರು ಹಂಗಾಮಿಗೆ ಜೂನ್‌ 1ರಿಂದ 16ರ ಮಧ್ಯದ ಅವಧಿಯಲ್ಲಿ 108 ಮಿ.ಮೀ ಮಳೆಯಾದರೆ ಬಿತ್ತನೆಗೆ ಹದವಾಗುತ್ತದೆ. ಆದರೆ ಈ ಪೈಕಿ 78 ಮಿ.ಮೀ ಮಳೆಯಾಗಿದ್ದು, ಇದರಿಂದ ಬಿತ್ತನೆಗೆ ಪೂರಕವಾಗಿಲ್ಲ. ಒಣ ಹವೆ ಮುಂದುವರಿದು ವಾರದ ಬಳಿಕ ಜೂನ್‌ 22ರಂದು ಆಳಂದ 9.6 ಮಿ. ಮೀ, ಖಜೂರಿ 31.1 ಮಿಮೀ, ನರೋಣಾ 7.0ಮಿ.ಮೀ, ನಿಂಬರಗಾ 19.0 ಮಿ.ಮೀ, ಮಾದನಹಿಪ್ಪರಗಾ 37.2 ಮಿ.ಮೀ, ಸರಸಂಬಾ26.0 ಮಿ.ಮೀ, ಕೋರಳ್ಳಿ 20. ಮಿ.ಮೀ ಮಳೆಯಾಗಿದ್ದು, ಬಿತ್ತನೆಗೆ ತೃಪ್ತಿಕವಾಗಿಲ್ಲದಿದ್ದರೂ ಅಲ್ಲಲ್ಲಿ ಬಿತ್ತನೆ ಆರಂಭಗೊಂಡಿದೆ. ಜೂನ್‌ 24ರಂದು ಆಳಂದ 34.2ಮಿ.ಮೀ, ಖಜೂರಿ 6.3 ಮಿ.ಮೀ, ನರೋಣಾ ಇಲ್ಲ, ನಿಂಬರಗಾ 31.0 ಮಿ.ಮೀ, ಮಾದನಹಿಪ್ಪರಗಾ 25.0 ಮಿ.ಮೀ, ಸರಸಂಬಾ 7.0 ಮಿ.ಮೀ, ಕೋರಳ್ಳಿ 10.0ಮಿ.ಮೀ, ಜೂ. 25ರಂದು ಆಳಂದ 3.6, ಖಜೂರಿ 54.3 ನರೋಣಾ 25.0, ಸರಸಂಬಾ 21 ಮಿ.ಮೀ ಮಳೆಯಾಗಿದೆ. ನಿಂಬರಗಾ ಮಾದನಹಿಪ್ಪರಗಾ, ಕೋರಳ್ಳಿ ಮಳೆ ಇಲ್ಲ. ನಂತರ ಎರಡು ದಿನಗಳಿಂದ ಒಣಹವೆ ಮುಂದುವರಿದಿದೆ ಎಂದು ತಹಶೀಲ್ದಾರ್‌ ಬಸವರಾಜ ಎಂ. ಬೆಣ್ಣೆಶಿರೂರ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next