ವಿಜಯಪುರ: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಉತ್ತಮವಾಗಿ ಮುಂಗಾರು ಪೂರ್ವ ಮಳೆ ಸುರಿಯುತ್ತಿದ್ದು, ರಾಜ್ಯದ ಜೀವನಾಡಿ ಕೃಷ್ಣಾ ನದಿ ತುಂಬಿ ಹತಿಯಲು ಆರಂಭಿಸಿದ್ದು, ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಜಲಾಶಯಕ್ಕೆ ಒಳ ಹರಿವು ಆರಂಭವಾಗಿದೆ. ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಅತ್ಯುತ್ತಮ ಮಳೆ ಸುರಿಯುತ್ತಿರುವ ಕಾರಣ ಕೃಷ್ಣಾ ಉಪ ನದಿಗಳೂ ಮೈದುಂಬಿ ಹರಿಯುತ್ತಿದೆ. ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಒಳಹರಿವು ಆರಂಭಗೊಂಡಿದ್ದು, ಮೊದಲ ದಿನ 1,897 ಕ್ಯೂಸೆಕ್ ಮೂಲಕ ಶಾಸ್ತ್ರೀ ಸಾಗರಕ್ಕೆ ಒಳ ಹರಿವು ಆರಂಭಗೊಂಡಿದ್ದು, ಭಾನುವಾರ 28,077 ಕ್ಯೂಸೆಕ್ ಗೆ ಏರಿಕೆಯಾಗಿದೆ.
ಇದನ್ನೂ ಓದಿ:ಚಿತ್ತೂರು: ಪಾದಚಾರಿ ಢಿಕ್ಕಿ ಹೊಡೆದ ಬೈಕ್: ಪಾದಚಾರಿಗೆ ಗಂಭೀರ ಗಾಯ
ಕಳೆದ ವರ್ಷ ಇದೇ ಸಂದರ್ಭದಲ್ಲಿ ಕೃಷ್ಣೆಯ ಶಾಸ್ತ್ರೀ ಜಲಾಶಯಕ್ಕೆ ಒಳ ಹರಿವು ಇರಲಿಲ್ಲ. ಈ ಬಾರಿ ಮೇ 20 ರಿಂದಲೇ ಜೀವನದಿ ಕೃಷ್ಣೆಗೆ ಜೀವಕಳೆ ಬಂದು ಶಾಸ್ತ್ರೀ ಜಲಾಶಯಕ್ಕೆ ಒಳ ಹರಿವು ಆರಂಭಗೊಂಡು, ರೈತರ ಮೊಗದಲ್ಲಿ ಸಂಭ್ರಮ ಮೂಡುವಂತೆ ಮಾಡಿದೆ.