Advertisement

ಗಣಿತ ಪರೀಕ್ಷೆ ಸುಸೂತ್ರ

07:04 PM Jun 29, 2020 | Naveen |

ಆಲಮಟ್ಟಿ: ಆಲಮಟ್ಟಿಯ ಮಂಜಪ್ಪ ಹರ್ಡೇಕರ ಸ್ಮಾರಕ ಪ.ಪೂ. ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ಪರೀಕ್ಷಾ ಕೇಂದ್ರ ಹಾಗೂ ಆರ್‌.ಬಿ.ಪಿ.ಜಿ. ಹಳಕಟ್ಟಿ ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ವಿದ್ಯಾರ್ಥಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಗಣಿತ ಪರೀಕ್ಷೆ ಬರೆದರು.

Advertisement

ಆಲಮಟ್ಟಿ ಹಾಗೂ ನಿಡಗುಂದಿ ಆಸ್ಪತ್ರೆಗಳ ಸಿಬ್ಬಂದಿ ಪರೀಕ್ಷಾರ್ಥಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಕೈಗಳಿಗೆ ಸ್ಯಾನಿಟೈಸರ್‌ ಹಾಕಿ ಕೊಠಡಿಗಳಿಗೆ ಕಳುಹಿಸಿಕೊಟ್ಟರು. ಎಂ.ಎಚ್‌.ಎಂ. ಪರೀಕ್ಷಾ ಕೇಂದ್ರದಲ್ಲಿ 147 ವಿದ್ಯಾರ್ಥಿಗಳು ಮತ್ತು 121 ವಿದ್ಯಾರ್ಥಿನಿಯರು ದಾಖಲಾತಿ ಪಡೆದಿದ್ದು ಶನಿವಾರ ನಡೆದ ಗಣಿತ ವಿಷಯದ ಪರೀಕ್ಷೆಗೆ 142 ವಿದ್ಯಾರ್ಥಿಗಳು, 112 ವಿದ್ಯಾರ್ಥಿನಿಯರು ಸೇರಿ ಒಟ್ಟು 254 ಪರೀಕ್ಷಾರ್ಥಿಗಳು ಹಾಜರಾಗಿದ್ದು 14 ಗೈರು ಹಾಜರಾಗಿದ್ದಾರೆ.

ಆರ್‌.ಬಿ.ಪಿ.ಜಿ. ಹಳಕಟ್ಟಿ ಪರೀಕ್ಷಾ ಕೇಂದ್ರದಲ್ಲಿ 153 ವಿದ್ಯಾರ್ಥಿಗಳು, 121 ವಿದ್ಯಾರ್ಥಿನಿಯರು ಸೇರಿ ಒಟ್ಟು 274 ಪರೀಕ್ಷಾರ್ಥಿಗಳು ದಾಖಲಾತಿ ಹೊಂದಿದ್ದು, ಅದರಲ್ಲಿ 146 ವಿದ್ಯಾರ್ಥಿಗಳು, 108 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರೆ 20 ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದಾರೆ. ಪರೀಕ್ಷೆ ಕೇಂದ್ರದ ಆವರಣ ಮತ್ತು ಪರೀಕ್ಷಾ ಕೊಠಡಿಗಳಲ್ಲಿ ಆಲಮಟ್ಟಿ ಗ್ರಾಪಂ ವತಿಯಿಂದ ಸ್ಯಾನಿಟೈಸರ್‌ ಸಿಂಪಡಣೆ ಮಾಡಲಾಗಿತ್ತು. ಸ್ಕೌಟ್ಸ್‌, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರು, ಪೊಲೀಸರು, ಆಶಾ ಕಾರ್ಯಕರ್ತೆಯರು ಪರೀಕ್ಷಾರ್ಥಿಗಳಲ್ಲಿ ಜಾಗೃತಿಯೊಂದಿಗೆ ಭದ್ರತೆ ಒದಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next