ಪರಿಹಾರ ಕ್ರಮ ಪರಿಶೀಲನೆ ಸಭೆ ಮಂಜಪ್ಪ ಹರ್ಡೇಕರ್ ಸ್ಮಾರಕ ಭವನದಲ್ಲಿ ಗುರುವಾರ ನಡೆಯಿತು.
Advertisement
ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ಕೇಳಿದರು. ಮಾತೃಪೂರ್ಣ ಯೋಜನೆಯಡಿ ಫಲಾನುಭವಿಗಳಿಗೆ ಸಮರ್ಪಕವಾಗಿ ಸೌಲಭ್ಯ ದೊರೆಯದಿರುವುದು ಬೆಳಕಿಗೆ ಬಂದಿತು. ಗ್ರಾಮಸ್ಥರಿಗೆ ಕುಡಿಯುವ ನೀರು ಹಾಗೂ ಶೌಚಾಲಯಗಳ ಬಗ್ಗೆ ಶಾಸಕರು ಪಿಡಿಒಗಳಿಂದ ಮತ್ತು ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಯೋಜನೆಯಲ್ಲಾಗಿರುವ ಲೋಪಗಳ ಬಗ್ಗೆ ಕೆಲ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಎರಡು ವರ್ಷದ ಹಿಂದೆ ಕಾಮಗಾರಿ ಆರಂಭಿಸಿದರೂ ಈವರೆಗೆ ಪೂರ್ಣಗೊಳ್ಳದ್ದಕ್ಕೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಯುಕೆಪಿ ಅಧಿಕಾರಿಗಳಿಂದ ಮಾಹಿತಿ ಪಡೆಯುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಭಿಯಂತರರಿಗೆ ಸೂಚಿಸಿದರು. ಅರಳದಿನ್ನಿಯಲ್ಲಿ ನಿರುಪಯುಕ್ತವಾದ ಶುದ್ದ ಕುಡಿವ ನೀರಿನ ಘಟಕವನ್ನು ಸ್ಥಳಾಂತರಿಸಬೇಕು. ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಆಲಮಟ್ಟಿಯಲ್ಲಿ ಕುಡಿವ ನೀರು ಸರಬರಾಜಿಗೆ ಆಂತರಿಕ ಪೈಪ್‌ಲೈನ್‌ಗೆ ಅಂದಾಜು ಪಟ್ಟಿ ತಯಾರಿಸಲು ಅಭಿಯಂತರರಿಗೆ ಸೂಚಿಸಿದರು. ತಾಪಂ ಸದಸ್ಯ ಮಲ್ಲು ರಾಠೊಡ, ಗ್ರಾಪಂ ಅಧ್ಯಕ್ಷೆ ಸೈದಮ್ಮಾ ಬೆಣ್ಣಿ, ಉಪಾಧ್ಯಕ್ಷ ಬಿ.ಜೆ.ನದಾಫ, ತಹಶೀಲ್ದಾರ್ ಶಿವಲಿಂಗ ಪ್ರಭು ವಾಲಿ, ಇಒಗಳಾದ ಭಾರತಿ ಚೆಲುವಯ್ಯ, ಬಿ.ಜೆ. ಇಂಡಿ, ತಾಲೂಕು ಆರೋಗ್ಯಾಧಿಕಾರಿ ಎಸ್.ಎಸ್.ಓತಗೇರಿ, ವೈದ್ಯಾಧಿಕಾರಿ ಪ್ರಕಾಶ ಗೋಟಖೀಂಡ್ಕಿ , ಕೃಷಿ ಅಧಿಕಾರಿ ಬಿ.ಎಸ್. ಕೋನರಡ್ಡಿ ಇತರರಿದ್ದರು.