Advertisement

ಕೆರೆ ತುಂಬಿಸಲು ಬೆಳ್ಳುಬ್ಬಿ ಮನವಿ

04:35 PM Apr 25, 2020 | Naveen |

ಆಲಮಟ್ಟಿ: ಮುಳವಾಡ ಏತ ನೀರಾವರಿ ಯೋಜನೆ ಕಾಲುವೆಯಿಂದ ಉಕುಮನಾಳ ಬಳಿ ಡೋಣಿ ನದಿಗೆ ನೀರು ಹರಿಸಬೇಕು ಹಾಗೂ ಮು.ಏ.ನೀ. ಯೋ.ಹಂತ-1 ಹಾಗೂ 2ರಲ್ಲಿ ಬರುವ ಕಾಲುವೆಗಳಿಂದ ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಮುಖ್ಯ ಅಭಿಯಂತರಗೆ ಎರಡು ಪ್ರತ್ಯೇಕ ಮನವಿ ಸಲ್ಲಿಸಿದರು.

Advertisement

ನಂತರ ಮಾತನಾಡಿದ ಅವರು, ಯುಕೆಪಿ ಅನುಷ್ಠಾನಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ಜನರು ಅಪಾರ ತ್ಯಾಗ ಮಾಡಿದ್ದಾರೆ. ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಆದ್ದರಿಂದ ಏ. 27ರೊಳಗಾಗಿ ಮು.ಏ.ನೀ.ಯೋ. ಪೂರ್ವ ಹಾಗೂ ಪಶ್ಚಿಮ ಕಾಲುವೆಗಳಿಗೆ ನೀರು ಹರಿಸಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳದಿದ್ದರೆ ಕೃಭಾಜನಿನಿ ಮುಖ್ಯ ಅಭಿಯಂತರರ ಕಚೇರಿ ಎದುರಿನಲ್ಲಿ ಜಿಪಂ ಮತ್ತು ತಾಪಂ ಸದಸ್ಯರನ್ನೊಳಗೊಂಡಂತೆ ರೈತರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಡೋಣಿ ನದಿಗೆ ನೀರು ಹರಿಸಿ:ಮುಳವಾಡ ಏತ ನೀರಾವರಿ ಯೋಜನೆಯ ವಿಜಯಪುರ ಮುಖ್ಯ ಕಾಲುವೆಯು ಉಕುಮನಾಳ ಗ್ರಾಮದ ಹತ್ತಿರ ಡೋಣ ನದಿಯನ್ನು ಸಂದಿಸುತ್ತದೆ. ಆ ಸ್ಥಳದಿಂದ ಡೋಣಿ ನದಿಗೆ ನೀರು ಹರಿಸುವುದರಿಂದ ಉಕುಮನಾಳ, ಯಂಭತ್ನಾಳ, ಡೋಣೂರ, ಉಕ್ಕಲಿ, ಉತ್ನಾಳ, ನಾಗರಾಳ, ಬೊಮ್ಮನಳ್ಳಿ, ನಂದ್ಯಾಳ, ಮುಳ್ಳಾಳ, ನೆಗಿನಾಳ,ಮಾರ್ಕಬ್ಬಿನಹಳ್ಳಿ, ಸಾತಿಹಾಳ ಸೇರಿದಂತೆ ಸುಮಾರು 25 ಗ್ರಾಮಗಳಿಗೆ ಕುಡಿಯುವ ನೀರು ದೊರಕಲಿದೆ ಎಂದು ಬೆಳ್ಳುಬ್ಬಿ ಹೇಳಿದರು.

ಜಿಪಂ ಸದಸ್ಯ ಸಂತೋಷ ನಾಯಕ, ಪ್ರವೀಣ ಪವಾರ, ಗುರುಸಂಗಪ್ಪ ಯರಂತೇಲಿ, ಬಸು ಸಿದಗೊಂಡ, ಬಸವರಾಜ ಸಾತಿಹಾಳ, ಕರವೀರ ಮಡಿವಾಳರ, ಅಂದಾನಿ ತೋಳಮಟ್ಟಿ, ಅಮರ ಮಡಿವಾಳರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next