Advertisement

ಇಟ್ಟಂಗಿ ಭಟ್ಟಿ ಕಾರ್ಮಿಕರನ್ನು ಮರಳಿ ಕಳುಹಿಸಿದ ಪೊಲೀಸರು

01:38 PM Apr 17, 2020 | Naveen |

ಆಲಮಟ್ಟಿ: ಹೊಟ್ಟೆಪಾಡಿಗಾಗಿ ಧಾರವಾಡ ಜಿಲ್ಲೆಗೆ ಹೋಗಿದ್ದ ಜಿಲ್ಲೆಯ ಸಿಂದಗಿ ತಾಲೂಕು ಹಾಗೂ ಕಲ್ಬುರ್ಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಕಾರ್ಮಿಕರು ಜಿಲ್ಲೆಯ ಗಡಿಪ್ರವೇಶಕ್ಕೂ ಮುನ್ನ ಅವರನ್ನು ತಡೆದು ಗುರುವಾರ ಬೆಳಗಿನ ಜಾವ ಮರಳಿ ಕಳುಹಿಸಲಾಯಿತು.

Advertisement

ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯನ್ನು ಏಪ್ರಿಲ್‌ 14ರ ವರೆಗೆ ಎಂದು ಘೋಷಿಸಿದ್ದರಿಂದ ಧಾರವಾಡ, ಕಲಘಟಗಿ ಹಾಗೂ ಹುಬ್ಬಳ್ಳಿಯ ಹೊರವಲಯದಲ್ಲಿರುವ ಇಟ್ಟಂಗಿ ತಯಾರಿಕೆ ಭಟ್ಟಿಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಸುಮಾರು ಎರಡು ನೂರು ಜನರು ಕಳೆದ ಕೆಲಸ ಮಾಡುತ್ತಿದ್ದ ಕಾರ್ಮಿಕರು ಏ.14ಕ್ಕೆ ಲಾಕಡೌನ್‌ ಮುಗಿಯಲಿದ್ದು, ನಂತರ ತಮ್ಮ ಸ್ವಗ್ರಾಮಗಳಿಗೆ ತೆರಳಬಹುದೆಂದು ನಿರೀಕ್ಷಿಸಿದವರಿಗೆ ಮೇ 3ರ ವರೆಗೆ ಲಾಕ್‌ಡೌನ್‌ ಅವ ಧಿಯನ್ನು ವಿಸ್ತರಿಸಿರುವುದರಿಂದ ಕಂಗೆಟ್ಟು, ಕಾಲ್ನಡಿಗೆ ಮೂಲಕ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಿದ್ದರು.

ಆಲಮಟ್ಟಿ ಹಳೇ ಕೃಷ್ಣಾ ಸೇತುವೆ ಮೂಲಕ ಒಳಗೆ ಪ್ರವೇಶಿಸಿದ್ದವರಲ್ಲಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಸೇರಿದ್ದರು. ಸಿಂದಗಿ ತಾಲೂಕಿನ ಮೋರಟಗಿಯ ಮಹಿಳೆಯೊಬ್ಬಳು ಕಂಕುಳಲ್ಲಿದ್ದ ಹಾಲುಗಲ್ಲದ ಕೂಸಿನೊಂದಿಗೆ ಬಂದಿದ್ದು, ಕಂದಮ್ಮ ಹಸಿವಿಂದ ಅಳುತ್ತಿರುವುದನ್ನು ಕಂಡು ಅಲ್ಲಿದ್ದವರು ಮಮ್ಮಲಮರುಗಿ ಮಗುವಿಗೆ ಬಿಸ್ಕತ್ತು ನೀಡಿದರು.

ಈ ಕುರಿತು ಆಗಮಿಸಿರುವ ವಲಸಿಗರನ್ನು ಮಾತನಾಡಿಸಿದಾಗ ತಾವು ತಮ್ಮ ಊರುಗಳನ್ನು ತಲುಪಲು ಕ್ಯಾಂಟರ್‌ ವಾಹನ ಉಪಯೋಗಿಸಿಕೊಂಡಿದ್ದು ಜಿಲ್ಲಾಗಡಿ ಚೆಕಪೋಸ್ಟಗಳಲ್ಲಿ ಜನರು ತುಂಬಿದ ವಾಹನವನ್ನು ಬಿಡುವದಿಲ್ಲವೆಂದು ತಿಳಿದು ಚೆಕಪೋಸ್ಟಗಳು ಸಮೀಪಿಸಿದಾಗ 2ಕಿ.ಮೀ.ಅಂತರದಲ್ಲಿ ವಾಹನದಿಂದ ಇಳಿದು ರೈತರ ಜಮೀನುಗಳಲ್ಲಿ ಕಾಲ್ನಡಿಗೆಯ ಮೂಲಕ ಹಾದು ನಂತರ ವಾಹನ ಏರಿಕೊಂಡು ಪ್ರಯಾಣ ಬೆಳೆಸುತ್ತಿದ್ದೇವೆ.ನಾವು ಕೆಲಸಮಾಡುತ್ತಿದ್ದ ಸ್ಥಳವನ್ನು ಬಿಟ್ಟು ಮೂರುದಿನಗಳಾಗಿವೆ ಅಲ್ಲಿಯಿಂದ ಈ ಕ್ಷಣದವರೆಗೂ ನಾವು ಯಾರೂ ಊಟ ಮಾಡಿಲ್ಲ, ರೈತರ ಜಮೀನಿನಲ್ಲಿರುವ ಹಾಗೂ ನದಿಗಳಲ್ಲಿನ ನೀರನ್ನು ಮಾತ್ರ ಕುಡಿದು ಪ್ರಯಾಣ ಬೆಳೆಸುತ್ತಿದ್ದೇವೆ ಇದರಿಂದ ಸಣ್ಣಸಣ್ಣ ಮಕ್ಕಳು ಹಸಿವಿನಿಂದ ಬಳಲಿದ್ದಾರೆ, ನಮಗೆ ಊಟಬೇಡ ಏನೂ ಬೇಡ ನಮ್ಮನ್ನು ನಮ್ಮೂರಿಗೆ ಕಳಿಸಿದರೆ ಸಾಕು ಎಂದು ಗೋಗರೆಯುತ್ತಿರುವ ದೃಶ್ಯ ಕಲ್ಲುಹೃದಯವರೂ ಕೂಡ ಕರಗುವಂತಾಗಿತ್ತು.

ವಲಸಿಗರ ಆಗಮನದ ಸುದ್ದಿ ತಿಳಿದ ಪಿಎಸ್‌ಐ ಸಿ.ಬಿ.ಚಿಕ್ಕೋಡಿ ದೂರವಾಣಿ ಮೂಲಕ ಇಟ್ಟಿಗೆ ಭಟ್ಟಿ ಮಾಲೀಕರನ್ನು ಸಂಪರ್ಕಿಸಿ ಕಾರ್ಮಿಕರನ್ನು ಮರಳಿ ಕಳುಹಿಸಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ನಂತರ ಅವರ ವಾಹನದಲ್ಲಿ ಜನರನ್ನು ತುಂಬಿ ಮರಳಿ ಕಳುಹಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next