Advertisement

ಸ್ಯಾನಿಟೈಜರ್‌ ಸುರಂಗಮಾರ್ಗಕ್ಕೆ ಚಾಲನೆ

06:27 PM Apr 17, 2020 | Naveen |

ಆಲಮಟ್ಟಿ: ಮಾರಕ ರೋಗ ಕೋವಿಡ್‌ -19 ನಿರ್ಮೂಲನೆಯಾಗಬೇಕಾದರೆ ಸಾಮಾಜಿಕ ಅಂತರ ಹಾಗೂ ಶುಚಿತ್ವ ಅತೀ ಮುಖ್ಯ ಎಂದು ಮುಖ್ಯ ಅಭಿಯಂತರ ಆರ್‌.ಪಿ. ಕುಲಕರ್ಣಿ ಹೇಳಿದರು. ಬುಧವಾರ ಮುಂಜಾನೆ ಆಲಮಟ್ಟಿಯ ಕೃಷ್ಣಾಭಾಗ್ಯ ಜಲನಿಗಮದ ಮುಖ್ಯಅಭಿಯಂತರರ ಕಚೇರಿಯ ಪ್ರವೇಶ ದ್ವಾರದ ಬಳಿ ಹಾಕಲಾಗಿರುವ ಸ್ಯಾನಿಟೈಜರ್‌ ಸುರಂಗಮಾರ್ಗ ಉದ್ಘಾಟಿಸಿ ಮಾತನಾಡಿದರು.

Advertisement

ಸ್ಯಾನಿಟೈಜರ್‌ ಸುರಂಗಮಾರ್ಗ ನಿರ್ಮಾಣ ಮಾಡಿರುವುದರಿಂದ ನೌಕರರು ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ಕಾರದ ಸೂಚನೆಗಳನ್ನು ಪಾಲಿಸಿಕೊಂಡು ಕರ್ತವ್ಯನಿರ್ವಹಿಸಬಹುದಾಗಿದೆ. ನೀರು ಅತ್ಯವಶ್ಯ ವಸ್ತುಗಳಲ್ಲಿ ಒಂದಾಗಿದೆ ಈ ಹಿನ್ನೆಲೆಯಲ್ಲಿ ಕರ್ತವ್ಯದೊಂದಿಗೆ ಜೀವ ಹಾಗೂ ಜೀವನವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ ಎಂದರು.

ಅಣೆಕಟ್ಟು ವೃತ್ತ ಅಧಿಧೀಕ್ಷಕ ಅಭಿಯಂತರ ಡಿ.ಬಸವರಾಜು ಹಾಗೂ ರಾಜ್ಯಸರ್ಕಾರಿ ನೌಕರರ ಸಂಘದ ಯೋಜನಾಶಾಖೆ ಅಧ್ಯಕ್ಷ ಎಸ್‌.ಬಿ.ದಳವಾಯಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next