Advertisement

ಸ್ವಾಧೀನಪಡಿಸಿಕೊಂಡ ರೈತರ ಭೂಮಿಗೆ ಪರಿಹಾರ ನೀಡಿ

06:06 PM Mar 20, 2020 | Naveen |

ಆಲಮಟ್ಟಿ: ಮುಳವಾಡ ಏತನೀರಾವರಿ ಯೋಜನೆ ವ್ಯಾಪ್ತಿಯ ಬಿಜಾಪುರ ಮುಖ್ಯ ಕಾಲುವೆ ನಿರ್ಮಾಣಕ್ಕೆ ವಶಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ತಾಳಿಕೋಟೆ ತಾಲೂಕಿನ ಭಂಟನೂರ ಗ್ರಾಮದಲ್ಲಿ ನಿರ್ಮಾಣವಾಗಿರುವ ಮುಳವಾಡ ಏತನೀರಾವರಿ ಯೋಜನೆ ಕಾಲುವೆಯು ನೂರಾರು ಎಕರೆ ಜಮೀನಿನಲ್ಲಿ ಹಾದುಹೋಗಿ ಮೂರು ವರ್ಷಗಳಾದರೂ ಇನ್ನೂವರೆಗೆ ನಮ್ಮ ಜಮೀನಿಗೆ ಪರಿಹಾರವೂ ಇಲ್ಲ ಮತ್ತು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ನೋಟಿಸನ್ನೂ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸಮಾಧಾನವಾಗಿ ಉತ್ತರಿಸಿದ ವಿಶೇಷ ಭೂಸ್ವಾಧೀನಾಧಿಕಾರಿ ರಘು ಎ.ಈ. ಅವರು, ಆಲಮಟ್ಟಿಯಲ್ಲಿ ವಿಶೇಷ ಭೂಸ್ವಾಧೀನಾ ಕಾರಿಯಾಗಿದ್ದರೂ ಕೂಡ ಇಲ್ಲಿನ ಪುನರ್ವಸತಿ ಅಧಿಕಾರಿ ಹಾಗೂ ಬಾಗಲಕೋಟೆಯಲ್ಲಿ ಎರಡು ಕಚೇರಿ ಸೇರಿದಂತೆ ಒಟ್ಟು ನಾಲ್ಕು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕಾಗಿರುವುದರಿಂದ ಜನರಿಗೆ ಸರಿಯಾದ ವೇಳೆಗೆ ನ್ಯಾಯ ದೊರಕಿಸಲು ಸಾಧ್ಯವಾಗುತ್ತಿಲ್ಲ, ಇನ್ನು ಕಾಲುವೆ ನಿರ್ಮಾಣವಾಗಿರುವ ಜಮೀನುಗಳಿಗೆ ಕಾಲಮಿತಿಯಲ್ಲಿ ಪರಿಹಾರ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಚ್‌.ಎಸ್‌. ಅಡಗಿಮನಿ, ಬಸವರಾಜ ಸಿಂಗನಳ್ಳಿ, ಜಟ್ಟೆಪ್ಪ ಹರಿಜನ, ಸೋಮಪ್ಪ ಹೊಲೇರ, ಬೌರಮ್ಮ ಗುಡಗುಂಟಿ, ಮಹಾದೇವಿ ಗುಡಗುಂಟಿ, ಸಂಗಮ್ಮ ಸಾಸನೂರ, ಶಾಂತಮ್ಮ ಸೂಡಗಿ, ಶಾಮಾಬಾಗಿ ಗುಡಗುಂಟಿ, ಶ್ರೀಶೈಲ, ಸಂಗಯ್ಯ ಮಠ, ಶವರಡ್ಡಿ ಭಂಟನೂರ, ಪರಮಾನಂದ ಬನ್ನಿಗಿಡದ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next