Advertisement

ಬಸವ ಸಾಗರ ಜಲಾಶಯಕ್ಕೆ ಆಲಮಟ್ಟಿ ನೀರು

01:46 PM May 05, 2019 | Naveen |

ಆಲಮಟ್ಟಿ: ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಸಂಗ್ರಹವಿರುವ ನೀರಿನಲ್ಲಿ ರಾಯಚೂರು ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಅಗತ್ಯವಾಗಿ ಬೇಕಾಗಿರುವ ನೀರನ್ನು ಜಲಾಶಯದ ಮುಂಭಾಗದಿಂದ ನದಿ ಪಾತ್ರದ ಮೂಲಕ ಹರಿಸಲಾಗುತ್ತಿದೆ.

Advertisement

ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೂ ಕೂಡ ಮಹಾರಾಷ್ಟ್ರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸುರಿದ ಮಳೆಯಿಂದ ಜಲಾಶಯಕ್ಕೆ ನೀರು ಹರಿದು ಬಂದಿತ್ತು. ಅದರಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ನೀರಿನಲ್ಲಿ ನಿಯಮದಂತೆ ಮೇ ತಿಂಗಳಲ್ಲಿ ಆರ್‌ಟಿಪಿಸಿಎಲ್ಗೆ ಬಿಡಬೇಕಾಗಿರುವ 0.6 ಟಿಎಂಸಿ ಅಡಿ ನೀರನ್ನು ಆಲಮಟ್ಟಿ ಜಲಾಶಯದಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಬಿಡುಗಡೆ ಮಾಡಲಾಗುತ್ತಿದ್ದು ನಂತರ ಅಲ್ಲಿಂದ ರಾಯಚೂರು ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಹರಿಸಲಾಗುತ್ತದೆ.

ಮೇ 4ರಂದು ನೀರು ಬಿಡುವ ಪ್ರಕ್ರಿಯೆ ಆರಂಭಿಸಲಾಗಿದ್ದು ಸದ್ಯ 3,000 ಕ್ಯೂಸೆಕ್‌ ನೀರನ್ನು ಜಲಾಶಯದ ಬಲಭಾಗದ ಕೆಪಿಸಿಎಲ್ ಮೂಲಕ ಹರಿಸಲಾಗುತ್ತಿದೆ. ಗುರವಾರವಷ್ಟೇ 0.5 ಟಿಎಂಸಿ ಅಡಿ ನೀರನ್ನು ಜಲಾಶಯದ ಮುಂಭಾಗದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶದಿಂದ ಹರಿಸಲಾಗಿತ್ತು. ಈಗ ಶನಿವಾರದಿಂದ ಮತ್ತೇ 0.6 ಟಿಎಂಸಿ ಅಡಿ ನೀರನ್ನು ಹರಿಸಲಾಗುತ್ತಿದೆ. ಶನಿವಾರ ರಾತ್ರಿಯಿಂದ ಹೊರ ಹರಿವು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಜಿಂದಾಲ್ಗೆ ಅನುಕೂಲಕ್ಕಾಗಿ ನೀರು: ಆಲಮಟ್ಟಿ ಜಲಾಶಯದಿಂದ ಹರಿಬಿಟ್ಟ ನೀರಿನ ಅರ್ಧದಷ್ಟು ನೀರು ನಾರಾಯಣಪುರ ಜಲಾಶಯಕ್ಕೆ ತಲುಪುತ್ತಿಲ್ಲ. ಆಲಮಟ್ಟಿ ಜಲಾಶಯದ ಮುಂಭಾಗದಲ್ಲಿರುವ ಜಿಂದಾಲ್ ಕಾರ್ಖಾನೆ ನೀರಿನ ಜಾಕ್‌ವೆಲ್ಗೆ ಈ ನೀರು ಅನುಕೂಲವಾಗಿದೆ. ಅವರ ಬೃಹತ್‌ ನೀರೆತ್ತುವ ಯಂತ್ರಗಳು ಈ ನೀರನ್ನು ಎತ್ತಿ ಹೊಸಪೇಟೆಯ ಅವರ ಕಾರ್ಖಾನೆಗೆ ಸಾಗಿಸುತ್ತಿವೆ. ಹೀಗಾಗಿ ನೀರು ಸಮರ್ಪಕವಾಗಿ ನಾರಾಯಣಪುರ ಜಲಾಶಯಕ್ಕೆ ತಲುಪುತ್ತಿಲ್ಲ. ಜಿಂದಾಲ್ದ ಅನುಕೂಲಕ್ಕಾಗಿ ಈ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಹಿಂಗಾರು ಬೆಳೆಗೆ ನೀರು ಕೊಡಲಿಲ್ಲ, ಈಗ ಯಾವುದೋ ಕಾರ್ಖಾನೆಗೆ ಅನುಕೂಲಕ್ಕಾಗಿ ನೀರನ್ನು ಹರಿಸುತ್ತಿದ್ದಾರೆ ಎಂದು ಎಂದು ಜಿಪಂ ಸದಸ್ಯ ಶಿವಾನಂದ ಅವಟಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next